ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಝ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 24 ಗಂಟೆಯಲ್ಲಿ 858 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ಅಲ್ಲದೆ ರಾಜ್ಯದಲ್ಲಿ ಓರ್ವ ಕೊರೊನಾದಿಂದ ಮೃತಪಟ್ಟಿದ್ದಾರೆ.
Advertisement
ಇಂದು 682 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ 39,18,452 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 36,289 ಮಂದಿಯನ್ನು ಕೊರೊನಾ ಟೆಸ್ಟ್‍ಗೆ ಒಳಪಡಿಸಲಾಗಿದ್ದು, ಇದುವರೆಗೆ 6,68,37,154 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಹೊಸದಾಗಿ ಡಾಂಬರು ಹಾಕಿದ ರಸ್ತೆ ಕುಸಿತ- ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ
Advertisement
Advertisement
5067 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ ಓರ್ವ ಮಹಾಮಾರಿಗೆ ಬಲಿಯಾಗಿದ್ದು, ಈ ಮೂಲಕ ಒಟ್ಟು 40072 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವಿಟಿ ದರ ಶೇ.2.36 ಇದ್ದು, ಮೃತರ ಪ್ರಮಾಣ ಶೇ.0.11 ಇದೆ. ಒಟ್ಟು 36,289 ಸ್ಯಾಂಪಲ್ (ಆರ್‍ಟಿಪಿಸಿಆರ್ 29,462 + 6,827 (ರ್ಯಾಪಿಡ್ + ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Advertisement
ಬೆಂಗಳೂರು ನಗರ ಒಂದರಲ್ಲೇ 820 ಪ್ರಕರಣಗಳು ಪತ್ತೆಯಾಗಿದ್ದು, ಬಾಗಲಕೋಟೆ 1, ಬೆಂಗಳೂರು ಗ್ರಾಮಾಂತರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 7, ಧಾರವಾಡ 2, ಹಾಸನ 3, ಕಲಬುರಗಿ 1, ಕೋಲಾರ 3, ಮಂಡ್ಯ 2, ಮೈಸೂರು 7, ರಾಯಚೂರು 2, ಶಿವಮೊಗ್ಗ 1, ತುಮಕೂರು 2, ಉಡುಪಿ 2, ಉತ್ತರ ಕನ್ನಡ 1 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ಇಂದಿನ ಹೆಲ್ತ್ ಬುಲೆಟಿನ್‍ನಲ್ಲಿ ವರದಿಯಾಗಿದೆ.