ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಇಂದು ಮತ್ತಷ್ಟು ಏರಿಕೆ ಕಂಡಿದೆ. ಇಂದು ಒಟ್ಟು 833 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಜೊತೆಗೆ ಇಂದು ಕೂಡ ಏಕೈಕ ಮರಣ ಪ್ರಕರಣ ವರದಿಯಾಗಿದೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 3.47ಕ್ಕೆ ಏರಿಕೆ ಕಂಡಿದೆ.
Advertisement
Advertisement
ಬೆಂಗಳೂರು ನಗರದಲ್ಲಿ ಇಂದು ಒಟ್ಟು 791 ಕೇಸ್ ಪತ್ತೆಯಾಗಿದ್ದು, ಈ ಮೂಲಕ ಬೆಂಗಳೂರು ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 4,199ಕ್ಕೆ ಏರಿಕೆ ಕಂಡಿದೆ. ಬೆಂಗಳೂರು ಹೊರತು ಪಡಿಸಿ ಮೈಸೂರಿನಲ್ಲಿ ದಾಖಲಾದ 12 ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಕೇಸ್ ಆಗಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,371ಕ್ಕೆ ತಲುಪಿದೆ. ಬೆಂಗಳೂರು ಹೊರತು ಪಡಿಸಿ ಉಳಿದಂತೆ 10 ಜಿಲ್ಲೆಗಳಲ್ಲಿ 42 ಕೇಸ್ ಮತ್ತು 19 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಇಂದು ಏಕೈಕ ಮರಣ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,068 ಮರಣ ಪ್ರಕರಣ ಪತ್ತೆಯಾಗಿದೆ. ಇಂದು 458 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ 2 ದಿನ- ಎಲ್ಲೆಲ್ಲಿಗೆ ಭೇಟಿ..?, ಕಾರ್ಯಕ್ರಮಗಳೇನು..?
Advertisement
Advertisement
ಈವರೆಗೆ ರಾಜ್ಯದಲ್ಲಿ ಒಟ್ಟು 39,58,824 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,14,343 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 45,352 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 23,990 ಸ್ಯಾಂಪಲ್ (ಆರ್ಟಿಪಿಸಿಆರ್ 17,413 + 6,577 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಬ್ರ್ಯಾಂಡೆಡ್ ಕಂಪನಿಗಳ ಹೆಸರಲ್ಲಿ ನಕಲಿ ವಸ್ತುಗಳ ಮಾರಾಟ – ಇಬ್ಬರ ಬಂಧನ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 791, ಮೈಸೂರು 12, ದಕ್ಷಿಣಕನ್ನಡ 6, ಉಡುಪಿ 5, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಬಳ್ಳಾರಿ ತಲಾ 4, ಧಾರವಾಡ 3, ಬೆಳಗಾವಿ 2, ರಾಮನಗರ ಮತ್ತು ಉತ್ತರಕನ್ನಡದಲ್ಲಿ ತಲಾ ಒಂದೊಂದು ಪ್ರಕರಣ ಸೇರಿ ಒಟ್ಟು 833 ಕೇಸ್ ವರದಿಯಾಗಿದೆ.