ಇಸ್ಲಾಮಾಬಾದ್: ಪ್ರೀತಿ ಅನ್ನುತ್ತಿದ್ದಂತೆ ಅದೆಷ್ಟೋ ಸಿನಿಮಾ ಕಥೆಗಳು (Cinema Story) ಕಣ್ಣ ಮುಂದೆ ಹಾದು ಹೋಗುತ್ತವೆ, ಎಂದೂ ಕುಡಿಯದೇ ಇರುವ ಟೀ ಅನ್ನು ಬೈಟು ಮಾಡಿ ಕುಡಿಯಬೇಕೆನ್ನಿಸುತ್ತದೆ. ಕೊರೆಯುವ ಮೈಚಳಿಗೆ ಬೆಚ್ಚನೆಯ ಅಪ್ಪುಗೆ ಬೇಕೆನ್ನಿಸುತ್ತದೆ. ಹಾಗಾಗಿಯೇ ಪ್ರೀತಿಗೆ (Love) ಕಣ್ಣಿಲ್ಲ ಅನ್ನೋ ಮಾತು ಪದೇ ಪದೇ ಸಾಬೀತಾಗುತ್ತಲೇ ಇದೆ.
ವಿದೇಶದಲ್ಲಿ ನಡೆದಿರುವ ಲವ್‌ಸ್ಟೋರಿ (Love Story) ನೈಜ ಪ್ರೀತಿಗೆ ಮತ್ತೊಂದು ಸಾಕ್ಷಿಯಾಗಿದೆ. 83 ವರ್ಷದ ವೃದ್ಧೆಯೊಬ್ಬರು ತನ್ನ 28 ವರ್ಷದ ಪ್ರೇಮಿಯನ್ನ (Lover) ಮದುವೆಯಾಗಲು ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಹೋಗಿದ್ದಾಳೆ. ಇದನ್ನೂ ಓದಿ: ತೆಲಂಗಾಣ ಉಪಚುನಾವಣೆ – ಬಿಜೆಪಿ ವಿರುದ್ಧ ಗೆದ್ದು ಬೀಗಿದ ಕೆಸಿಆರ್
Advertisement
Advertisement
ಪೋಲೆಂಡಿನ 83ರ ಬ್ರೋಮಾ ಎಂಬ ವೃದ್ಧೆ, ಪಾಕಿಸ್ತಾನದ (Pakistan) 28ರ ಯುವಕ ಹಫೀಜ್ ಮೊಹಮ್ಮದ್ ನದೀಮ್ ನನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಅದಕ್ಕಾಗಿ ತನ್ನ ದೇಶದಿಂದ ಸಾವಿರಾರು ಕಿಮೀ ಪ್ರಯಾಣ ಬೆಳೆಸಿ ಪಾಕಿಸ್ತಾನಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ
Advertisement
Advertisement
ವೃತ್ತಿಯಲ್ಲಿ ಆಟೋ ಮೆಕ್ಯಾನಿಕ್ ಆಗಿರುವ ಹಫೀಜ್ ಮೊಹಮ್ಮದ್ ನದೀಮ್‌ನನ್ನು ಬ್ರೋಮಾ 6 ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿ ಮಾಡಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ ಇದೀಗ ವಿವಾಹದ ಹಂತಕ್ಕೆ ತಲುಪಿದೆ. ಸಾವಿರಾರು ಕಿಮೀ ನಿಂದ ಬಂದಿದ್ದ ಬ್ರೋಮಾ ಮುಸ್ಲಿಂ ಕಾನೂನಿನ ಪ್ರಕಾರವೇ ಕೈಗೆ ಗೋರಂಟಿ ಧರಿಸಿ, ಸಾಂಪ್ರದಾಯಿಕ ಉಡುಗೆಯುಟ್ಟು ಮದುವೆಯಾಗಿದ್ದಾರೆ. ಸದ್ಯ ಇಬ್ಬರ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡುತ್ತಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ 60 ವರ್ಷದ ಮಹಿಳೆಯೊಬ್ಬರು ತನಗಿಂತ 30 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗಲು 14,400 ಕಿಮೀ ಪ್ರಯಾಣ ಬೆಳೆಸಿ ಬಂದಿದ್ದರು. ಆ ನಂತರ 73 ವರ್ಷದ ವೃದ್ಧೆಯೊಬ್ಬರು 18ರ ಯುವಕನನ್ನು ವರಿಸಿ, ಫಿಲಿಪೈನ್ಸ್ನಲ್ಲಿ ಮದುವೆಯಾದ್ದರು. ಇದೀಗ ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನ ಅಚ್ಚರಿಗೊಳಿಸಿದೆ.