– ಐಟಿ ಅಧಿಕಾರಿಗಳ ಪ್ರಶ್ನೆಗೆ ದರ್ಶನ್ ಉತ್ತರ ಏನು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್‌ಗೆ ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ನಡೆದಾಗ ದರ್ಶನ್‌ಗೆ ಆದಾಯ ತೆರಿಗೆ ಅಧಿಕಾರಿಗಳು ಕೂಡ ಶಾಕ್ ನೀಡಿದ್ರು. ಈ ವೇಳೆ ದರ್ಶನ್ (Darshan) ಮನೆಯಲ್ಲಿ ಪತ್ತೆಯಾಗಿದ್ದ 82 ಲಕ್ಷ ರೂಪಾಯಿ ಹಣವನ್ನ ಸೀಜ್ ಮಾಡಿದ್ರು. ಬಳಿಕ ಹಣದ ಮೂಲ ಕೆದಕಿದ ಅಧಿಕಾರಿಗಳು ಎಲ್ಲಿಂದ ಬಂತು ಎಂಬ ಬಗ್ಗೆ ಬಳ್ಳಾರಿ ಜೈಲಿಗೂ ತೆರಳಿ ಮಾಹಿತಿ ಕಲೆಹಾಕಿದ್ರು.
ಇದೀಗ ಮತ್ತೆ ಪರಪ್ಪನ ಅಗ್ರಹಾರ (Parappana Agrahara) ಸೇರಿರುವ ದರ್ಶನ್ ಬಳಿ 82 ಲಕ್ಷ ಹಣದ ಮೂಲವನ್ನ ಐಟಿ ಕೆದಕಿದೆ. 82 ಲಕ್ಷ ರೂ. ಮೂಲ ಏನು? ಇಷ್ಟು ಹಣ ಯಾರು ಕೊಟ್ರು.. ಎಲ್ಲಿಂದ ಬಂತು..? ಎಂಬೆಲ್ಲಾ ಐಟಿ ಪ್ರಶ್ನೆ ಮಾಡಿದ್ದು, ದರ್ಶನ್ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ನಿರ್ದೇಶಕ ನಂದಕಿಶೋರ್‌ಗೆ ಸಾಲ ನೀಡಿದ ಕೇಸ್‌ಗೆ ಟ್ವಿಸ್ಟ್ – ಉದ್ಯಮಿ ಕಿಡ್ನ್ಯಾಪ್ ಹಿಂದೆ ರಘು ಕೈವಾಡ ಸಾಬೀತು
ನಾನು ಕೃಷಿ (Agriculture) ಮಾಡಿದ್ದೆ, ಪ್ರಾಣಿಗಳ ಮಾರಾಟವನ್ನೂ (Animal Sale) ಮಾಡಿದ್ದೆ. ಅಲ್ಲದೇ ನನ್ನ ಅಭಿಮಾನಿಗಳು ಹುಟ್ಟುಹಬ್ಬದ ದಿನ ನನಗೆ ದುಡ್ಡು ಕೊಟ್ಟಿದ್ರು ಎಂದಿದ್ದಾರೆ. ನಾನು ಮಾಡಿದ ಕೃಷಿಯಿಂದಲೇ 82 ಲಕ್ಷ ರೂ. ಹಣ ಸಿಕ್ಕಿದ್ದು ಅಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದರ್ಶನ್ ಹೇಳಿಕೆ ನೀಡಿದ್ದಾರೆ. ದರ್ಶನ್ ಹೇಳಿಕೆ ಪ್ರತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಹಾಗಾದ್ರೆ ಐಟಿ ಅಧಿಕಾರಿಗಳ ಪ್ರಶ್ನೆ ಏನಿತ್ತು? ಅದಕ್ಕೆ ದರ್ಶನ್ ಕೊಟ್ಟ ಉತ್ತರ ಏನು ಅನ್ನೋ ಸಮಗ್ರ ವಿವರ ನೋಡೊದಾದ್ರೆ… ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ಮತ್ತೆ ಶಾಕ್; ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್
ಐಟಿ ಕೇಳಿದ್ದು – ದರ್ಶನ್ ಹೇಳಿದ್ದು..
1. ನೀವು ಕಳೆದ ಆರು ವರ್ಷಗಳಲ್ಲಿ ಯಾರಿಗಾದರೂ ಕೈ ಸಾಲ ಕೊಟ್ಟಿದ್ರಾ? ಹಾಗೇನಾದ್ರೂ ಕೈ ಸಾಲ ನೀಡಿದ್ರೆ ಯಾವ ದಿನಾಂಕ ಸಮಯದ ಬಗ್ಗೆ ಸ್ಪಷ್ಟನೆ ನೀಡಬಹುದು..?
ಉತ್ತರ : ಹೌದು ನಾನು 40 ಲಕ್ಷ ಕೈ ಸಾಲವನ್ನು ನನ್ನ ಸ್ನೇಹಿತರಾದ ರಾಮ್ ಮೋಹನ್ ರಾಜ್‌ಗೆ ಫೆಬ್ರವರಿ 2024ರಲ್ಲಿ ನೀಡಿದ್ದೇನೆ. ಮೋಹನ್ ನನಗೆ 2024ರ ಮೇ ತಿಂಗಳಿನಲ್ಲಿ ಹಿಂದಿರುಗಿಸಿದ್ದಾರೆ. ಮೋಹನ್ ಮೂಲತಃ ಬೆಂಗಳೂರಿನವರೇ ತುಂಬಾ ಹಳೆಯ ಸ್ನೇಹಿತರು. ಅದನ್ನ ಬಿಟ್ಟರೆ 6 ವರ್ಷದಿಂದ ನಾನು ಯಾರಿಗೂ ಸಾಲ ನೀಡಿಲ್ಲ, ಪಡೆದಿಲ್ಲ
2. ಫೆಬ್ರವರಿ 2024ರಲ್ಲಿ ನೀವು ಮೋಹನ್ ರಾಜ್‌ಗೆ 40 ಲಕ್ಷ ಹಣ ನೀಡಿದ್ದೀರಿ.. ಅದಕ್ಕೆ ಸಂಬಂಧಿಸಿದಂತೆ ಹಣದ ಮೂಲ ಸ್ಪಷ್ಟ ಪಡಿಸಬಹುದಾ?
ಉತ್ತರ: ಮೋಹನ್ ರಾಜ್‌ಗೆ ನೀಡಿದ 40 ಲಕ್ಷ ಹಣದಲ್ಲಿ 25 ಲಕ್ಷ ಹಣವನ್ನು ನಾನು ಕೃಷಿಯಿಂದ ಬಂದ ಲಾಭದಲ್ಲಿ ಸಂಪಾದಿಸಿದ್ದೇನೆ. ಇನ್ನುಳಿದ 15 ಲಕ್ಷಕ್ಕೆ ಪ್ರಾಣಿಗಳ ಮಾರಾಟ ಮಾಡಿದ್ದೇನೆ. ಇನ್ನುಳಿದಂತೆ ನನ್ನ ಹುಟ್ಟುಹಬ್ಬದ ದಿನ ನನ್ನ ಅಭಿಮಾನಿಗಳು ನೀಡಿದ ಹಣ ಅದರಲ್ಲಿತ್ತು.
3. ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿ 19-06-2024ರಂದು ನಿಮ್ಮ ಮನೆಯಲ್ಲಿ 37 ಲಕ್ಷದ 50 ಸಾವಿರ ರೂಪಾಯಿ ಸೀಜ್ ಮಾಡಿದ್ದಾರೆ, ಅದು ಕೂಡ ಕೃಷಿ ಲಾಭದಿಂದಲೇ ಬಂದಿದ್ದಾ?
ಉತ್ತರ: ಹೌದು, ನಾನು ಈಗಾಗಲೇ ಹೇಳಿದ ಹಾಗೇ ನನಗೆ ಬಂದಿರೋ ಹಣವೆಲ್ಲಾ ಕೃಷಿ, ಪ್ರಾಣಿಗಳ ಮಾರಾಟ ಮತ್ತು ಅಭಿಮಾನಿಗಳು ನೀಡಿದ ಉಡುಗೊರೆ ಆಗಿದೆ ಅದನ್ನು ಬಿಟ್ಟು ಬೇರೆ ಏನು ಇಲ್ಲ.
4. ನಿಮ್ಮ ಮನಯಲ್ಲಿ ಸಿಕ್ಕ 37 ಲಕ್ಷ ಮತ್ತು ನಿಮ್ಮ ಪತ್ನಿಯ ಬಳಿ ಸಿಕ್ಕ 3 ಲಕ್ಷ ಹಣಕ್ಕೆ ಯಾವುದಾದರೂ ಮೂಲ ದಾಖಲೆಗಳು ಇದ್ಯಾ?
ಉತ್ತರ: ಇಲ್ಲ ನನ್ನ ಬಳಿ ಸಿಕ್ಕ ಹಣಕ್ಕೆ ಮತ್ತು ನನ್ನ ಪತ್ನಿಯ ಬಳಿ ಸಿಕ್ಕ ಹಣಕ್ಕೆ ಸಧ್ಯಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ. ನಾನು 2024-2025 ರಲ್ಲಿ ಸಲ್ಲಿಕೆ ಮಾಡುವ ಆದಾಯ ತೆರಿಗೆ ಮಾಹಿತಿಯಲ್ಲಿ ಉಲ್ಲೇಖ ಮಾಡುತ್ತೇನೆ. ಇದನ್ನೂ ಓದಿ: ತುಳುನಾಡಿಗೆ ಬಂದು ಹರಕೆ ನೇಮೋತ್ಸವ ಸಲ್ಲಿಸಿದ ಕಾಂತಾರ ಚಿತ್ರತಂಡ


