ನವದೆಹಲಿ: ದಿ ಯುನೀಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(UIDAI) ಈವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡ್‍ಗಳನ್ನ ನಿಷ್ಕ್ರಿಯಗೊಳಿಸಿದೆ.
2016ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಂತ್ರಣದ ಸೆಕ್ಷನ್ 27 ಮತ್ತು 28ರ ಅಡಿ ಹೇಳಲಾಗಿರುವ ವಿವಿಧ ಕಾರಣಗಳಿಗಾಗಿ ಆಧಾರ್ ನಂಬರ್‍ಗಳನ್ನ ನಿಷ್ಕ್ರಿಯಗೊಳಿಸಲಾಗಿದೆ.
2016ರ ಆಧಾರ್ ಕಾಯ್ದೆ ಜಾರಿಗೂ ಮುನ್ನ ಆಧಾರ್ ಲೈಫ್ ಸೈಕಲ್ ಮ್ಯಾನೇಜ್‍ಮೆಂಟ್ ನಿಯಮಗಳಡಿ ಆಧಾರ್ ನಂಬರ್‍ಗಳನ್ನ ನಿಷ್ಕ್ರಿಯಗೊಳಿಸಲಾಗಿತ್ತು.
ಈಗ ನಿಮ್ಮ ಆಧಾರ್ ನಂಬರ್ ಸ್ಟೇಟಸ್ ತಿಳಿಯೋದು ಹೇಗೆ?
1. ಯುಐಡಿಎಐ ವೆಬ್‍ಸೈಟ್‍ನಲ್ಲಿ ವೆರಿಫೈ ಆಧಾರ್ ನಂಬರ್ ಆಯ್ಕೆಯ ಮೂಲಕ ನಿಮ್ಮ ಆಧಾರ್ ಕಾರ್ಡ್ ಸ್ಟೇಟಸ್ ತಿಳಿಯಬಹುದು.
2. ವೆಬ್‍ಸೈಟ್‍ಗೆ ಭೇಟಿ ನೀಡಿದ ನಂತರ ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಕೇಳುತ್ತದೆ.
3. ನಂತರ ನಿಮ್ಮ ಮಾಹಿತಿಯನ್ನ ನೀಡಬೇಕು.
4. ನಿಮ್ಮ ಆಧಾರ್ ಕಾರ್ಡ್ ಸಿಂಧುವಾಗಿದ್ದರೆ ಕಾರ್ಡ್ ಸ್ಟೇಟಸ್ ಬಗ್ಗೆ ನಿಮಗೆ ಒಂದು ದೃಢೀಕರಣ ಮೆಸೇಜ್ ತೋರಿಸುತ್ತದೆ. ಈ ಸಂದೇಶದಲ್ಲಿ ನಿಮ್ಮ ವಯಸ್ಸು, ರಾಜ್ಯ ಮತ್ತು ನಿಮ್ಮ ನೊಂದಾಯಿತ ಮೊಬೈಲ್ ನಂಬರ್‍ನ ಕೊನೆಯ 3 ಸಂಖ್ಯೆಗಳು ಇರುತ್ತದೆ.
5. ನಿಮ್ಮ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡಿದ್ರೆ ಈ ಆಧಾರ್ ನಂಬರ್ ಚಾಲ್ತಿಯಲ್ಲಿಲ್ಲ ಎಂಬ ದೃಢೀಕರಣ ಸಂದೇಶ ಬರುತ್ತದೆ.