ನವದೆಹಲಿ: ಭಾರತ ತೊರೆಯುವಂತೆ 81 ಚೀನಾ ಪ್ರಜೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಸಚಿವ ರಾಯ್ ಈ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನಿಷೇಧದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವಿಳಂಬ: ಸಿಜೆಐ
Advertisement
Advertisement
2019ರಿಂದ 2021ರ ಅವಧಿಯಲ್ಲಿ 81 ಚೀನಾ ಪ್ರಜೆಗಳಿಗೆ ಭಾರತ ಬಿಟ್ಟು ಹೊರಡುವಂತೆ ನೋಟಿಸ್ ನೀಡಲಾಗಿದೆ. ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಮತ್ತು ಇತರ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ಆರೋಪವಿರುವ 726 ಇತರರನ್ನು ಪ್ರತಿಕೂಲ ಪಟ್ಟಿಯಲ್ಲಿ ಇರಿಸಲಾಗಿದೆ ಎಂದು ರಾಯ್ ಮಾಹಿತಿ ನೀಡಿದ್ದಾರೆ.
Advertisement
117 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ನಿತ್ಯಾನಂದ ರಾಯ್ ಹೇಳಿದ್ದಾರೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ
Advertisement
ಸಂಸತ್ತಿನ ಉಭಯ ಸದನಗಳಲ್ಲಿ ಮುಂಗಾರು ಅಧಿವೇಶನವನ್ನು ಪ್ರತಿಪಕ್ಷಗಳು ನಿರಂತರವಾಗಿ ಅಡ್ಡಿಪಡಿಸುತ್ತಿವೆ. ಇದರಿಂದಾಗಿ ಪಟ್ಟಿ ಮಾಡಲಾದ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ.