– ಐಪಿಎಲ್‍ನಲ್ಲಿ ಸ್ಟೋಕ್ಸ್ ಎರಡನೇ ಶತಕ
ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಆಡಿದ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.
ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಜೊತೆಯಾಟ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ ರಾಜಸ್ಥಾನ್ ರಾಯಲ್ಸ್ ಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿ ರಾಜಸ್ಥಾನ್ ತಂಡ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಶತಕ ಜೊತೆಯಾಟದಿಂದ ಇನ್ನೂ 10 ಬಾಲ್ ಉಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
A CENTURY with a SIX for @benstokes38. What an innings this has been from Stokes.#Dream11IPL pic.twitter.com/JkUmK6M6GA
— IndianPremierLeague (@IPL) October 25, 2020
ಸ್ಟೋಕ್ಸ್ ಸ್ಯಾಮ್ಸನ್ ಸ್ಫೋಟಕ ಆಟ
ಐದು ಓವರಿಗೆ 45 ರನ್‍ಗಳಿಸಿ ಎರಡು ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ರಾಜಸ್ಥಾನವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಉತ್ತಮ ಜೊತೆಯಾಟವಾಡಿದ ಅವರು, 82 ಬಾಲಿಗೆ 152 ರನ್‍ಗಳ ಜೊತೆಯಾಟವಾಡಿದರು. ಇದರಲ್ಲಿ ಉತ್ತಮವಾಗಿ ಆಡಿದ ಸ್ಟೋಕ್ಸ್ ಅವರು 60 ಬಾಲಿಗೆ 107 ರನ್ ಸಿಡಿಸಿ ಐಪಿಎಲ್‍ನಲ್ಲಿ ಎರಡನೇ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂಜು 31 ಬಾಲಿಗೆ 54 ರನ್ ಸಿಡಿಸಿದರು.
2500 runs and counting for @IamSanjuSamson in IPL ????????#Dream11IPL pic.twitter.com/QRqheBm6Hs
— IndianPremierLeague (@IPL) October 25, 2020
ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ವೇಗಿ ಜೇಮ್ಸ್ ಪ್ಯಾಟಿನ್ಸನ್ ಆರಂಭಿಕ ಆಘಾತ ನೀಡಿದರು. ಎರಡನೇ ಓವರಿನಲ್ಲೇ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿದರು. ನಂತರ ನಾಯಕ ಸ್ಟೀವನ್ ಸ್ಮಿತ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಆಟಕ್ಕೆ ಮುಂದಾದರು. ಆದರೆ ಮತ್ತೆ ದಾಳಿಗಿಳಿದ ಜೇಮ್ಸ್ ಪ್ಯಾಟಿನ್ಸನ್ ಅವರು 11 ರನ್ ಗಳಿಸಿದ್ದ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.
.@IamSanjuSamson joins the party with a well made FIFTY. His 13th in IPL.#Dream11IPL pic.twitter.com/STN4Qq1AdY
— IndianPremierLeague (@IPL) October 25, 2020
ನಂತರ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಇದರ ಬೆನ್ನಲ್ಲೆ ಬೆನ್ ಸ್ಟೋಕ್ಸ್ 28 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರವೂ ಕೂಡ ಔಟ್ ಆಗದೆ ಬ್ಯಾಟ್ ಬೀಸಿದ ಈ ಜೋಡಿ 57 ಬಾಲಿಗೆ ಶತಕ ಜೊತೆಯಾಟವಾಡಿತು. ಈ ನಡುವೆ ಕೇವಲ 27 ಬಾಲಿಗೆ ಸಂಜು ಸ್ಯಾಮ್ಸನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು.