ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಕುರಿತು ಚಂದನವನ ಅಂಗಳದಿಂದ ಮತ್ತೊಂದು ಭರ್ಜರಿ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಸೇಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಜೇಮ್ಸ್ ಚಿತ್ರವು, ಮುಂದಿನ ನಾಲ್ಕು ದಿನಗಳ ಟಿಕೆಟ್ ಸೋಲ್ಡೌಟ್ ಆಗಿವೆಯಂತೆ. ಇವತ್ತು ಒಂದೇ ದಿನಕ್ಕೆ ಅಂದಾಜು 20 ಕೋಟಿಗೂ ಅಧಿಕ ಆದಾಯ ಹರಿದು ಬಂದಿದೆ ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ
Advertisement
Advertisement
ಈ ನಡುವೆ ಜೇಮ್ಸ್ ಸಿನಿಮಾದ ಟಿವಿ ರೈಟ್ಸ್ ಎಲ್ಲ ಭಾಷೆಗೂ ಸೇರಿ ಅಂದಾಜು 80 ಕೋಟಿಗೆ ಸೇಲ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಸುವರ್ಣ ವಾಹಿನಿಯು 13.80 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿದೆಯಂತೆ. ಸೋನಿ ಡಿಜಿಟಲ್ 40 ಕೋಟಿ ಕೊಟ್ಟು ಪ್ರಸಾರದ ಹಕ್ಕನ್ನು ಪಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ
Advertisement
Advertisement
ತಮಿಳಿನ ಸನ್ ನೆಟ್ ವರ್ಕ್ 2.17 ಕೋಟಿ, ತೆಲುಗಿನ ಮಾ ಟಿವಿ 5.70 ಕೋಟಿ, ಮಲೆಯಾಳಂ 1.2 ಕೋಟಿ, ಹಿಂದಿ ಸೋನಿ 2.70 ಕೋಟಿ, ಭೋಜಪುರಿ 5.50 ಕೋಟಿ ಹಾಗೂ ಮತ್ತಿತರ ಭಾಷೆಯಲ್ಲೂ ಡಬ್ ಆದ ಚಿತ್ರದಿಂದ ಅಂದಾಜು 10 ಕೋಟಿಯಷ್ಟು ಹಣ ಬಂದಿದೆಯಂತೆ. ಹಾಗಾಗಿ ಥಿಯೇಟರ್ ರಿಲೀಸ್ ಮತ್ತು ಟಿವಿ ರೈಟ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ಬಂದು ಹಣ 100 ಕೋಟಿ ತಲುಪಿದೆ. ಬಿಡುಗಡೆಯ ದಿನವೇ ನೂರು ಕೋಟಿ ಕ್ಲಬ್ ಗೆ ಸೇರಿದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ.
ನಾಲ್ಕು ದಿನಗಳ ಟಿಕೇಟ್ ಈಗಾಗಲೇ ಮಾರಾಟವಾಗಿರುವುದರಿಂದ ಮತ್ತು ಅತೀ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದರಿಂದ ಜೇಮ್ಸ್ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದೆ.