ವಾಷಿಂಗ್ಟನ್: ಅಮೆರಿಕದ 8 ವರ್ಷದ ಬಾಲಕನೊಬ್ಬ ಒಂದೇ ವರ್ಷದಲ್ಲಿ 185 ಕೋಟಿ ರೂ. (26 ಮಿಲಿಯನ್ ಡಾಲರ್) ಸಂಪಾದಿಸಿ ಭರ್ಜರಿ ಸುದ್ದಿಯಲ್ಲಿದ್ದಾನೆ.
ಯೂಟ್ಯೂಬ್ ಚಾನಲ್ ಮೂಲಕ 2019ನೇ ಸಾಲಿನಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿದ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದರಲ್ಲಿ 8 ವರ್ಷದ ಬಾಲಕ ರೈನ್ ಗುವಾನ್ ಅತಿ ಹೆಚ್ಚು ಹಣ ಸಂಪಾದಿಸಿದ ಯೂಟ್ಯೂಬರ್ ಎನಿಸಿಕೊಂಡಿದ್ದಾನೆ. ರೈನ್ ಗುವಾನ್ ತನ್ನ ಯೂಟ್ಯೂಬ್ ಚಾನಲ್ ಮೂಲಕ 2019ರಲ್ಲಿ 185 ಕೋಟಿ ರೂ. (26 ಮಿಲಿಯನ್ ಡಾಲರ್) ಸಂಪಾದಿಸಿ ದಾಖಲೆ ನಿರ್ಮಿಸಿದ್ದಾನೆ.
Advertisement
Advertisement
ರೈನ್ ಗುವಾನ್ ಯೂಟ್ಯೂಬ್ ಚಾನಲ್ ಹೆಸರು ರೈನ್ಸ್ ವರ್ಲ್ಡ್ ಆಗಿದ್ದು, ಇದನ್ನು ಆತನ ಪೋಷಕರು 2015ರಲ್ಲಿ ಆರಂಭಿಸಿದ್ದಾರೆ. ರೈನ್ಸ್ ವಲ್ರ್ಡ್ ಚಾನಲ್ 2.29 ಕೋಟಿ (22.9 ಮಿಲಿಯನ್) ಚಂದಾದಾರರನ್ನು ಹೊಂದಿದೆ.
Advertisement
ರೈನ್ ಗುವಾನ್ ಯೂಟ್ಯೂಬ್ ಚಾನಲ್ ವಿರುದ್ಧ ಅಮೆರಿಕಾದ ವಕಾಲತು ಸಂಸ್ಥೆಯು ವಿಡಿಯೋದಲ್ಲಿನ ಜಾಹೀರಾತು ಸತ್ಯವನ್ನು ಪ್ರಶ್ನಿಸಿ ಯುಎಸ್ ಫೆqರಲ್ ಟ್ರೇಡ್ ಕಮಿಷನ್‍ನಲ್ಲಿ ದೂರು ನೀಡಲಾಗಿತ್ತು. ಉತ್ಪನ್ನಗಳನ್ನು ಪರಿಚಯಿಸಲು ಕೆಲವು ಬ್ರ್ಯಾಂಡ್‍ಗಳು ಪ್ರಾಯೋಜಕತ್ವವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಸೂಚಿಸಿಲ್ಲ ಎಂದು ಆರೋಪಿಸಿತ್ತು.
Advertisement
ಈ ಕಾರಣದಿಂದ ರೈನ್ ಗುವಾನ್ ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನಲ್ ಹೆಸರನ್ನು ‘ರೈನ್ ಟಾಯ್ಸ್ ರಿವ್ಯೂ’ ಬದಲಾಗಿ ‘ರೈನ್ಸ್ ವರ್ಲ್ಡ್’ ಎಂದು ಬದಲಾಯಿಸಿದ್ದ. ಒಂದೊಂದು ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ ಪರಿಣಾಮ ರೈನ್ ಕೋಟ್ಯಧಿಪತಿಯಾಗಿದ್ದಾನೆ.
ದಕ್ಷಿಣ ಕೊರಿಯಾದ 6 ವರ್ಷದ ಬಾಲಕಿ ಬೋರಾಮ್, ಯೂಟ್ಯೂಬ್‍ನಲ್ಲಿ 3 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಬಾಲಕಿ ಎರಡು ಚಾನೆಲ್‍ಗಳನ್ನು ನಡೆಸುತ್ತಿದ್ದು, ಬೋರಾಮ್ ಟ್ಯೂಬ್ ವ್ಲಾಗ್ 1.75 ಕೋಟಿ ಚಂದಾದಾರರು ಮತ್ತು ಬೋರಮ್ ಟ್ಯೂಬ್ ಟಾಯ್ ರಿವ್ಯೂ 1.36 ಕೋಟಿ ಚಂದಾದಾರರನ್ನು ಹೊಂದಿದ್ದಾಳೆ. ಈ ಪುಟ್ಟ ಬಾಲಕಿ ಯೂಟ್ಯೂಬ್ ಸ್ಟಾರ್ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇದೇ ವರ್ಷ ಜೂನ್ ತಿಂಗಳಿನಲ್ಲಿ ಖರೀದಿಸಿದ್ದಾಳೆ.
ಈ ಪುಟ್ಟ ಸೆಲೆಬ್ರಿಟಿ ಗಂಗ್ನಮ್‍ನ ಚಿಯೊಂಗ್ಡ್ಯಾಮ್-ಡಾಂಗ್‍ನಲ್ಲಿ 258.3 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಿರುವ 1975ರ ಕಟ್ಟಡವನ್ನು ಖರೀದಿಸಿದ್ದಾಳೆ. ಇದು ಸಿಯೋಲ್‍ನ ಸಮೃದ್ಧ ಪ್ರದೇಶಗಳಲ್ಲಿ ಒಂದಾಗಿದೆ. ಬಾಲಕಿ ಬೋರಾಮ್ ಪೋಷಕರು ಆರು ವರ್ಷಗಳ ಹಿಂದೆ ಪುತ್ರಿಯ ಹೆಸರಿನಲ್ಲಿ ಕಂಪನಿ ಆರಂಭಿಸಿದ್ದರು. ಸದ್ಯ ಈ ಕಂಪನಿಯೇ 55 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಖರೀದಿಸಿದೆ.
ಯೂಟ್ಯೂಬ್ ಸ್ಟಾರ್ ಬೋರಾಮ್ ಪ್ರತಿ ತಿಂಗಳಿಗೆ ಮಾಸಿಕ 16 ಕೋಟಿ ರೂ. ಆದಾಯವನ್ನು ಪಡೆಯುತ್ತಿದ್ದಾಳೆ. ಈ ಪುಟ್ಟ ಬಾಲಕಿ ತಾನು ಆಟವಾಡುವ ಹಾಗೂ ಪೋಷಕರೊಂದಿಗೆ ಕಾಲ ಕಳೆಯುವ ಮುದ್ದಾದ ವಿಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‍ಗೆ ಅಪ್‍ಲೋಡ್ ಮಾಡಿ ಅನೇಕರ ಮನ ಗೆದ್ದ ಪರಿಣಾಮ ಕೋಟಿ ರೂ. ಆದಾಯ ಗಳಿಸುತ್ತಿದ್ದಾಳೆ.