ಮಂಡ್ಯ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾಕ್ಕೆ ಭೇಟಿ ನೀಡೋದೇ ಹೆಮ್ಮೆಯ ವಿಷಯ. ಅಂಥದ್ರಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸಕ್ಕೆ ಹೋಗಲಿದ್ದಾರೆ.
ಹೌದು. ಮಂಡ್ಯದಲ್ಲಿರುವ ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಸಾ ಪ್ರವಾಸಕ್ಕೆ ತೆರಳಲಿದ್ದಾರೆ. ಶಾಲೆಯ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ನಾಸಾಗೆ ಕಳುಹಿಸುತ್ತಿದೆ. ವಿದ್ಯಾರ್ಥಿಗಳಾದ ಸ್ವರ್ಣ, ಚಂದನ, ವಂದನಾ, ಸಾರಿಕಾ, ಚಿದಾನಂದ, ಪ್ರಣತಿ ಆರ್. ಭಾರದ್ವಜ್, ಹರ್ಷಿತ್ ಪಿ. ಆತ್ರೇಯ, ಸೋಹನ್ ಜಿ. ನಾಯಕ್‍ನನ್ನು ನಾಸಾಕ್ಕೆ ಕರೆದುಕೊಂಡು ಹೋಗಲಾಗ್ತಿದೆ.
Advertisement
Advertisement
ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಅಭಿರುಚಿ ಬೆಳೆಸುವುದರ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಪೂರ್ವಭಾವಿಯಾಗಿ ಪರೀಕ್ಷೆ ಮಾಡಲಾಗಿತ್ತು. ಅದ್ರಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನ ಪ್ರವಾಸಕ್ಕಾಗಿ ಆಯ್ಕೆ ಮಾಡಲಾಗಿದೆ.
Advertisement
ಇದೀಗ ಮಕ್ಕಳಿಗೆ ವೀಸಾ ಬಂದಿರೋದ್ರಿಂದ ಜುಲೈನಲ್ಲಿ ಅಮೆರಿಕಾದ ಪ್ರವಾಸ ಕೈಗೊಳ್ಳಲಾಗ್ತಿದೆ. ಇನ್ನು ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ಶೇ.90ರಷ್ಟು ಶಿಕ್ಷಣ ಸಂಸ್ಥೆಯೇ ಪಾವತಿ ಮಾಡುತ್ತಿದ್ದು, ಮಕ್ಕಳ ಜೊತೆಗೆ ಶಾಲೆಯಲ್ಲಿ ಕೆಲಸ ನಿರ್ವಹಿಸುವ ಮೂವರು ಸಿಬ್ಬಂದಿ ಕೂಡ ನಾಸಾಕ್ಕೆ ಪ್ರವಾಸ ಹೋಗಲಿದ್ದಾರೆ.
Advertisement
ಪ್ರವಾಸದ ಬಗ್ಗೆ ಸಾಕಷ್ಟು ಉತ್ಸುಕರಾಗಿರೋ ವಿದ್ಯಾರ್ಥಿಗಳು, ಇದೊಂದು ಉತ್ತಮ ಅವಕಾಶ. ಈ ಪ್ರವಾಸ ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಅವಕಾಶ ಸಿಕ್ಕಿರೋದು ಖುಷಿ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶ ಸಿಗೋದೇ ಕಡಿಮೆ. ಎಲ್ಲ ಶಾಲೆಯಲ್ಲೂ ಈ ರೀತಿಯ ಆಯೋಜನೆಯಾದ್ರೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ನಂಬರ್ 1 ಆಗಲಿದೆ ಅಂತಾ ಸಂತಸ ವ್ಯಕ್ತಪಡಿಸ್ತಿದ್ದಾರೆ.