– ಬೀದಿಯಲ್ಲೇ ಗರ್ಭಿಣಿಯ ಪರದಾಟ
ಬೆಂಗಳೂರು: ಲೇವಾದೇವಿಗಾರರ ನಿಯಂತ್ರಣಕ್ಕೆ ಸರ್ಕಾರ ಮುಂದಾದರೂ ದೌರ್ಜನ್ಯ ಮಾತ್ರ ನಿಂತಿಲ್ಲ. ನಗರದ ಅಗ್ರಹಾರ ದಾಸರಹಳ್ಳಿಯಲ್ಲಿ ಬಡ್ಡಿಕೋರರು ದೌರ್ಜನ್ಯ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಲೇವಾದೇವಿಗಾರರು ಯಶೋಧ ಎಂಬವರ ಕುಟುಂಬದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ದಂಧೆಕೋರರು 5 ಲಕ್ಷಕ್ಕೆ 80 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಆದ್ರೆ ಇನ್ನೂ 40 ಲಕ್ಷ ಹಣ ಕೊಡ್ಬೇಕು ಅಂತ ಹೇಮಾವತಿ, ಬಡ್ಡಿ ಲಕ್ಷ್ಮಿ, ಮಂಜುನಾಥ್ ಸೇರಿದಂತೆ 8 ಜನರಿಂದ ಕಿರುಕುಳ ನೀಡುತ್ತಿದ್ದಾರೆ.
20 ರಿಂದ 30% ಬಡ್ಡಿಗೆ ಹಣ ನೀಡಿ ಜನರ ಸುಲಿಗೆ ಮಾಡುತ್ತಿರುವ ಈ ಗ್ಯಾಂಗ್, ಬಡ್ಡಿ ಸರಿಯಾಗಿ ಕಟ್ತಿಲ್ಲ ಅಂತಾ ಮನೆಗೇ ನುಗ್ಗಿ ಆಸ್ತಿ ಪತ್ರಕ್ಕೆ ಕನ್ನ ಹಾಕುತ್ತಿದೆ. ಯಶೋಧ ಅವರು ಬಡ್ಡಿ ಹಣಕ್ಕಾಗಿ ಮೈ ಮೇಲಿನ ತಾಳಿಯನ್ನೂ ಮಾರಿದ್ದಾರೆ. ಎರಡು ದಿನದ ಹಿಂದೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೀಗ ಹಾಕಿ ಕಿರುಕುಳ ನೀಡಿದೆ.
ಯಶೋಧಮ್ಮರ ಮಗಳು ಪವಿತ್ರ 6 ತಿಂಗಳ ಗರ್ಭಿಣಿಯಾಗಿದ್ದು, ಮನೆಯಿಲ್ಲದೇ ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಹೆದರಿ ಮನೆಗೆ ಹೋಗದೇ ಕುಟುಂಬ ಬೀದಿಯಲ್ಲಿಯೇ ಜೀವನ ಕಳೆಯುತ್ತಿದೆ. ಸದ್ಯ 8 ಮಂದಿ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಮಾಗಡಿ ರೋಡ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv