InternationalLatestLeading NewsMain Post

ಅಮೆರಿಕದಲ್ಲಿ ಭಾರತ ಮೂಲದ 8 ತಿಂಗಳ ಮಗು ಸೇರಿ ನಾಲ್ವರು ಕಿಡ್ನ್ಯಾಪ್‌

ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ (California) ಮರ್ಸಿಡ್ ಕೌಂಟಿಯಲ್ಲಿ ಭಾರತ ಮೂಲದ 8 ತಿಂಗಳ ಹೆಣ್ಣು ಮಗು ಮತ್ತು ಆಕೆಯ ಪೋಷಕರನ್ನು ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

8 ತಿಂಗಳ ಮಗು ಅರೂಹಿ ಧೇರಿ ಮತ್ತು ಪೋಷಕರಾದ ಜಸ್ಲೀನ್ ಕೌರ್ (27), ಜಸ್ದೀಪ್ ಸಿಂಗ್ (36) ಹಾಗೂ ಚಿಕ್ಕಪ್ಪ ಅಮನದೀಪ್ ಸಿಂಗ್ (39) ಅವರನ್ನು ಅಪಹರಿಸಲಾಗಿದೆ. ಇದನ್ನೂ ಓದಿ: ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ

ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಏಕೆಂದರೆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ ದಕ್ಷಿಣ ಹೆದ್ದಾರಿ 59 ರ 800 ಬ್ಲಾಕ್‌ನಲ್ಲಿ ನಾಲ್ವರನ್ನು ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019 ರಲ್ಲೂ ಭಾರತೀಯ ಮೂಲದ ಟೆಕ್ಕಿ ತುಷಾರ್ ಅಟ್ರೆ ಅವರು ಯುಎಸ್‌ನಲ್ಲಿ ಕಿಡ್ನ್ಯಾಪ್‌ ಆಗಿದ್ದರು. ನಂತರ ಗೆಳತಿಯ ಕಾರಿನಲ್ಲಿ ಟೆಕ್ಕಿ ಶವ ಪತ್ತೆಯಾಗಿತ್ತು. ಇದನ್ನೂ ಓದಿ: 2.9 ಕೋಟಿ ಬೆಳಕಿನ ವರ್ಷಗಳ ಹಿಂದಿನ ನಕ್ಷತ್ರಪುಂಜ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

Live Tv

Leave a Reply

Your email address will not be published. Required fields are marked *

Back to top button