ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಮೀನುಗಾರರ ಸಂಪರ್ಕಕ್ಕೆ ಪ್ರಯತ್ನ ನಡೆಸುತ್ತಿದೆ.
ಚಂದ್ರ ಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿದ್ದಾರೆ.
Advertisement
Advertisement
ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟ್ ಮೂಲಕ ಡಿ.13 ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದ ಇವರು, ಡಿ.15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದವರು. ಆದರೆ ಆ ಬಳಿಕ ಬೋಟ್‍ನಲ್ಲಿದ್ದ ಜಿಪಿಎಸ್ ಸಂಪರ್ಕವೂ ಕಳೆದುಕೊಂಡಿದೆ.
Advertisement
ಸದ್ಯ ನಾಪತ್ತೆ ಆಗಿರುವ ಮೀನುಗಾರರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕರಾವಳಿ ಕಾವಲು ಪಡೆಯಿಂದ ಮೀನುಗಾರರ ಸಂಪರ್ಕಕ್ಕೆ ಯತ್ನ ನಡೆಸಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv