ಚಾಮರಾಜನಗರ: ರೈತರಿಗೆ ಉಪಟಳ ಕೊಡುತ್ತಿದ್ದ ಕೊಡಗಿನ 8 ಸಾಕಾನೆಗಳನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ವನ್ಯಜೀವಿ ತಜ್ಞೆ, ಆನೆಗಳ ಸಂಶೋಧಕಿ ಪ್ರಜ್ಞಾ ಚೌಟ ಅವರು ಆನೆಮನೆ ಫೌಂಡೇಷನ್ ಸ್ಥಾಪಿಸಿ ಕಾಡಿನ ಮಧ್ಯೆ ಆನೆಗಳನ್ನು ಸಾಕುತ್ತಿದ್ದರು. ಆದರೆ ಆನೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗದೆ ಜೊತೆಗೆ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶಪಡಿಸುತ್ತಿದ್ದರಿಂದ ಅರಣ್ಯ ಇಲಾಖೆ ಆನೆಗಳನ್ನು ಇಲಾಖಾ ಶಿಬಿರಕ್ಕೆ ಸ್ಥಳಾಂತರಿಸಲು ಆದೇಶಿಸಿತ್ತು.
Advertisement
Advertisement
Advertisement
ಅದರಂತೆ ಹೆಣ್ಣಾನೆಗಳಾದ ಹೀರಣ್ಯ(8), ಮಾಲಾದೇವಿ(34), ಪೂಜಾ(8), ಕಮಲಿ(4), ಕನ್ನಿಕಾ(2), ಹೀರಣ್ಯಾ(2 ತಿಂಗಳು) ಹಾಗೂ ಗಂಡಾನೆಗಳಾದ ಧರ್ಮ(12), ಜಗ(7) ಎಂಬವುಗಳನ್ನು ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಬಂಡೀಪುರದ ಸಿಎಫ್ ನಟೇಶ್ ಕೂಡ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಕ್ರಿಸ್ತನಿಗೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯಗೆ ಜಾಗ ಎಲ್ಲಿದೆ: ಸಿ.ಟಿ ರವಿ
Advertisement
ವನ್ಯಜೀವಿ ತಜ್ಞೆಯಾಗಿರುವ ಪ್ರಜ್ಞಾ ಚೌಟ ಕನ್ನಡದ ಹೆಸರಾಂತ ರಂಗಕರ್ಮಿ ಡಿ.ಕೆ.ಚೌಟ ಅವರ ಪುತ್ರಿಯಾಗಿದ್ದು ಆನೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಜೊತೆಗೆ ಆನೆ ಎಂಬ ಆಕರ್ಷಕ ಶಿಬಿರವನ್ನು ರೂಪಿಸಿದ್ದರು.