ಚಿಕ್ಕಮಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಸಿದ್ದರಾಮಯ್ಯಗೆ ಎಲ್ಲಿ ಜಾಗ ಸಿಗುತ್ತದೆ ಎಂದು ಶಾಸಕ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದರೆ ಅಂಬೇಡ್ಕರ್‍ಗೆ ಎಲ್ಲಿ ಜಾಗ ಸಿಗುತ್ತದೆ. ಕ್ರಿಸ್ತನಿಗೆ ಪರಿವರ್ತನೆಯಾದರೆ ಸಿದ್ದರಾಮಯ್ಯನವರಿಗೆ ಎಲ್ಲಿ ಜಾಗ ಇದೆ. ಹಿಂದೂಗಳು ಬೌದ್ಧರು, ವೈಷ್ಣವರಾದರೆ, ಅಂಬೇಡ್ಕರ್, ರಾಮನಿಗೆ ಜಾಗ ಸಿಗುತ್ತದೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಇಸ್ಲಾಮಿಗೆ ಪರಿವರ್ತನೆಯಾದರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿರುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ಮತಾಂತರ ಮತಗಳ ಗಳಿಕೆಗೆ ಇರುವ ಸಾಧನ ಅಲ್ಲ. ಮತಾಂತರ ದೇಶಾಂತರಕ್ಕೆ ಸಮ ಅಂತ ಗಾಂಧಿಜೀ ಹೇಳಿದ್ದಾರೆ. ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದೂತ್ವ ಅಲ್ಲ, ಗಾಂಧಿ ಹಿಂದುತ್ವ ಎನ್ನುತ್ತಾರೆ. ಆದರೆ ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ದರು ಅಂತ ಕಾಂಗ್ರೆಸ್ ಇತಿಹಾಸ ಓದಲಿ. ಸಿದ್ದರಾಮಯ್ಯನವರೇ ನೀವು ಒಮ್ಮೆ ಇತಿಹಾಸ ಓದಿ. ಮತಾಂತರ ನಿಷೇಧ ಕಾಯ್ದೆ ಅಂದರೆ ಅವರವರ ಮತದಲ್ಲಿ ಸುರಕ್ಷಿತವಾಗಿ ಮತಾಚರಣೆ ಮಾಡಲಿ ಎನ್ನುವುದು. ವ್ಯಾಪಾರ, ಭಯ, ಆಮಿಷದ ಮೂಲಕ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದಲೇ ಟೀಕೆ
Advertisement
Advertisement
ಹೆದರಿಕೆ ಹುಟ್ಟಿಸಿ ಮತಾಂತರ ಮಾಡುವವರು ಭಯ ಪಡಬೇಕು. ಸ್ವ ಇಚ್ಛೆಯಿಂದ ಮತಾಂತರಗೊಳ್ಳುವವರಿಗೆ ಕಾಯ್ದೆಯಿಂದ ತೊಡಕಿಲ್ಲ. ಕಾಂಗ್ರೆಸ್ಸಿಗೆ ಸಮಾಜ ಹಿತ, ರಾಷ್ಟ್ರಹಿತ ಎರಡರ ಕಾಳಜಿಯಿಲ್ಲ. ವೋಟ್ ಬ್ಯಾಂಕ್ ರಾಜನೀತಿ ಮಾತ್ರ ಕಾಂಗ್ರೆಸ್ ಆದ್ಯತೆ ನೀಡುತ್ತದೆ. ಬಹುಸಂಖ್ಯಾತ ಸಮಾಜ ಆಕ್ರಮಣಕಾರಿಯಾಗಿ ಹೊರಟರೆ ಅವರೇ ಮತಾಂತರ ನಿಷೇಧ ಕಾಯ್ದೆ ತನ್ನಿ ಅಂತಾರೆ. ಮತಾಂತರ ನಿಷೇಧ ಕಾಯ್ದೆ ಬೇಡ ಎಂದು ಹೇಳುವವರೇ ತನ್ನಿ ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
CT Ravi, Siddaramaiah, conversion bill, Chikkamagaluru