ಕೋಲ್ಕತ್ತಾ: ದುರ್ಗಾದೇವಿ ಮೂರ್ತಿ ವಿಸರ್ಜನೆ (Durga Idol Immersion) ವೇಳೆ ಉಂಟಾದ ದಿಢೀರ್ ಪ್ರವಾಹದಿಂದ (Flood) 8 ಮಂದಿ ಸಾವನ್ನಪ್ಪಿ ಹಲವರು ನಾಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಜಲ್‍ಪೈಗುರಿಯಲ್ಲಿ (Jalpaiguri) ಬುಧವಾರ ರಾತ್ರಿ ನಡೆದಿದೆ.
Advertisement
ಪಶ್ಚಿಮ ಬಂಗಾಳದ ಜಲ್‍ಪೈಗುರಿಯಲ್ಲಿ ನಿಯೋರಾ ನದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ದುರ್ಗಾದೇವಿ ಮೂರ್ತಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಏಕಾಏಕಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ದುರ್ಘಟನೆಯಲ್ಲಿ ಈಗಾಗಲೇ 8 ಮಂದಿ ಮರಣ ಹೊಂದಿದ್ದು, ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ 5 ಮಂದಿ ನೀರುಪಾಲು
Advertisement
????INDIA :#VIDEO TRAGIC SCENES FROM FATAL FLASH FLOOD IN MALBAZAR JALPAIGURI DISTRICT, WEST BENGAL!
Flood washed away the crowd that had gathered at Mal river for ritual Durga Puja idol immersion.
At least 7 people killed.#BreakingNews #UltimaHora #Flooding pic.twitter.com/48eZqnbXtw
— LoveWorld (@LoveWorld_Peopl) October 5, 2022
Advertisement
ಕಳೆದೆರಡು ದಿನದಿಂದ ಈ ಭಾಗದಲ್ಲಿ ಅಧಿಕ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ದಿಢೀರ್ ಆಗಿ ಉಂಟಾದ ಪ್ರವಾಹದಲ್ಲಿ ಅನೇಕ ಭಕ್ತರು ಕೊಚ್ಚಿಹೋಗಿದ್ದಾರೆ. 8 ಮಂದಿಯ ಮೃತದೇಹ ಪತ್ತೆಯಾಗಿದ್ದು, 50ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಲಾಗಿದೆ. 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ರಾವಣನ ಬದಲಾಗಿ, ಇಡಿ, ಸಿಬಿಐ ಪ್ರತಿಕೃತಿ ಸುಟ್ಟು ವಿಜಯದಶಮಿ ಆಚರಿಸಿದ ಕೈ ಕಾರ್ಯಕರ್ತರು
Advertisement
Anguished by the mishap during Durga Puja festivities in Jalpaiguri, West Bengal. Condolences to those who lost their loved ones: PM @narendramodi
— PMO India (@PMOIndia) October 5, 2022
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳಿಂದ ರಕ್ಷಣಾ ಕಾರ್ಯಚರಣೆ ನಡಯುತ್ತಿದೆ. ದುರಂತದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.