CrimeLatestMain PostNational

ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ 5 ಮಂದಿ ನೀರುಪಾಲು

ಜೈಪುರ: ನವರಾತ್ರಿಯ ದುರ್ಗಾದೇವಿ ಮೂರ್ತಿ ವಿಸರ್ಜನೆಯ (Durga idol immersion) ವೇಳೆ ಮಳೆ ನೀರಿನಿಂದ ತುಂಬಿದ್ದ ಹಳ್ಳದಲ್ಲಿ (ditch) ಮುಳುಗಿ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಅಜ್ಮೇರ್‌ದಲ್ಲಿ (Ajmer) ಬುಧವಾರ ನಡೆದಿದೆ.

ಮೃತರನ್ನು ಪವನ್ ರಾಯ್ಗರ್(35), ಗಜೇಂದ್ರ ರಾಯ್ಗರ್(28), ರಾಹುಲ್ ಮೇಘವಾಲ್(24), ಲಕ್ಕಿ ಬೈರ್ವಾ(21) ಹಾಗೂ ರಾಹುಲ್ ರಾಯ್ಗರ್(20) ಎಂದು ಪೊಲೀಸರು ಗುರುತಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಧರಿಸದ್ದಕ್ಕೆ ಡಿಬಾರ್‌ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು

ವರದಿಗಳ ಪ್ರಕಾರ ಯುವಕರು ಮೂರ್ತಿ ವಿಸರ್ಜನೆಗೆಂದು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಹಳ್ಳ ಹೆಚ್ಚು ಆಳವಿಲ್ಲ ಎಂದು ಭಾವಿಸಿ ಯುವಕರು ಕೆಳಗೆ ಇಳಿದಿದ್ದು, ಅದು ಹೆಚ್ಚು ಆಳವಿದ್ದುದರಿಂದ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಸಿಬ್ಬಂದಿಯಿಂದಲೇ 12 ಕೋಟಿ ದರೋಡೆ – ಗುರುತು ಮುಚ್ಚಿಡಲು ಬುರ್ಕಾ ಧರಿಸಿದ

ಘಟನೆ ನಾಸಿರಾಬಾದ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button