ಜೈಪುರ: ಹಳೆ ದ್ವೇಷದ ಹಿನ್ನೆಲೆ ದಲಿತ ಯುವಕನನ್ನು ಅಪಹರಿಸಿ ಹಲ್ಲೆ ಮಾಡಿ, ಆತನಿಗೆ ಮೂತ್ರ ಕುಡಿಸಿರುವ ಘಟನೆ ಚೂರು ಜಿಲ್ಲೆಯಲ್ಲಿ ನಡೆದಿದೆ.
ಉಮೆಶ್, ಬೀರ್‍ಬಲ್ ಬಂಧಿತ ಆರೋಪಿಗಳಾಗಿದ್ದಾರೆ. ರುಖಾಸರ್ ಗ್ರಾಮದ ನಿವಾಸಿ ರಾಕೇಶ್ ಮೇಘವಾಲ್ ಸಂತ್ರಸ್ತ ಯುವಕನಾಗಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ಪೊಲೀಸರ ದಾಳಿ
ನಡೆದಿದ್ದೇನು?: ಸಂತ್ರಸ್ತ ರಾಕೇಶ್ ಮೇಘವಾಲ್ ನೀಡಿದ ಪೊಲೀಸ್ ದೂರಿನ ಪ್ರಕಾರ, ಆರೋಪಿಗಳು ರಾತ್ರಿ 11 ಗಂಟೆಯ ಸುಮಾರಿಗೆ ಮನೆಯಿಂದ ಅಪಹರಿಸಿ ಹೊಲಕ್ಕೆ ಕರೆದೊಯ್ದಿದ್ದರು. ಬಲವಂತವಾಗಿ ಮದ್ಯ ಕುಡಿಸಿ ನಂತರ ಅದೇ ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ನನಗೆ ಕುಡಿಸಿದ್ದಾರೆ. ಆರೋಪಿಗಳು ಜಾತಿ ನಿಂದನೆ ಮತ್ತು ಇತರ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎಂದು ಮೇಘವಾಲ್ ರತನ್‍ಗಢ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ
ಜನವರಿ 27ರಂದು ಗ್ರಾಮದ ಮೇಲ್ವರ್ಗದ 8 ಜನ ಕ್ಷುಲ್ಲಕ ಕಾಣರಣಕ್ಕೆ ಹಲ್ಲೆಮಾಡಿದ್ದಾರೆ. 8 ಜನಗಳ ಗುಂಪು ಈ ಕೃತ್ಯ ಎಸಗಿದ್ದಾರೆ. ಮೇಘವಾಲ್ ಅವರ ಬೆನ್ನಿನ ಮೇಲಿನ ಗಾಯದ ಗುರುತುಗಳಾಗಿವೆ. ಹಲ್ಲೆ ನಡೆದಿರುವುದನ್ನು ಖಚಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದೇವೆ. ಇತರ 6 ಮಂದಿ ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.