77ನೇ ಸ್ವಾತಂತ್ರ್ಯ ದಿನ – ಟ್ವೀಟ್‌ನಲ್ಲಿ ಜನತೆಗೆ ಗಣ್ಯರ ಶುಭಾಶಯ

Public TV
4 Min Read
77th Independence Day

ಬೆಂಗಳೂರು: ಭಾರತ ಇಂದು 77ನೇ ಸ್ವಾತಂತ್ರ್ಯ ದಿನವನ್ನು (77th Independence Day) ಆಚರಿಸುತ್ತಿದೆ. ಈ ಶುಭದಿನದಲ್ಲಿ ರಾಜಕೀಯ ಗಣ್ಯರಾದ ನರೇಂದ್ರ ಮೋದಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಅನೇಕರು ಟ್ವಿಟ್ಟರ್‌ನಲ್ಲಿ ಶುಭಹಾರೈಸಿದ್ದಾರೆ.

77ನೇ ಸ್ವಾತಂತ್ರ್ಯ ದಿನದ ಹಿನ್ನೆಲೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಜನತೆಗೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಕನಸನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಎಲ್ಲರಿಗೂ ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು. ದೇಶದ ಸ್ವಾತಂತ್ರ‍್ಯಕ್ಕೆ ಕಾರಣರಾದ ಎಲ್ಲಾ ಸ್ವಾತಂತ್ರ‍್ಯ ಹೋರಾಟಗಾರರಿಗೆ ನಾನು ನಮಸ್ಕರಿಸುತ್ತೇನೆ. ಈ ದಿನ ಸ್ವಾತಂತ್ರ‍್ಯಕ್ಕಾಗಿ ತಮ್ಮನ್ನು ತಾವು ಮುಡಿಪಾಗಿರಿಸಿದ ಅಮರ ತ್ಯಾಗಿಗಳು ಕನಸು ಕಂಡ ಸುವರ್ಣ ಭಾರತವನ್ನು ನಿರ್ಮಿಸುವ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ. ಬನ್ನಿ, ಸ್ವಾತಂತ್ರ‍್ಯದ ಸುವರ್ಣ ಯುಗದಲ್ಲಿ ರಾಷ್ಟ್ರದ ಐಕ್ಯತೆ ಮತ್ತು ಸಮೃದ್ಧಿಗೆ ನಮ್ಮ ಕೈಲಾದ ಕೊಡುಗೆ ನೀಡುವ ಪ್ರತಿಜ್ಞೆಯನ್ನು ಮಾಡೋಣ ಎಂದು ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನದ ಹಿನ್ನೆಲೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ. ಪ್ರತಿಯೊಬ್ಬ ದೇಶದ ನಾಗರಿಕನಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: IndependenceDay: ಭಾಗ-3: ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತ ಸ್ಮರಣೀಯ

77ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ (Siddaramaiah) 1947 ಆಗಸ್ಟ್ 15 ರಂದು ಕೋಟ್ಯಂತರ ಭಾರತೀಯರ ತ್ಯಾಗ, ಬಲಿದಾನದ ಫಲವಾಗಿ ನಮಗೆ ದೊರೆತಿರುವ ಈ ಸ್ವಾತಂತ್ರ‍್ಯವನ್ನು ಸಮಾಜದಲ್ಲಿರುವ ಅಸಮಾನತೆ, ಶೋಷಣೆ, ತಾರತಮ್ಯಗಳ ನಿರ್ಮೂಲನೆಗೈಯ್ಯುವ ಶಪಥದೊಂದಿಗೆ ಅರ್ಥಪೂರ್ಣವಾಗಿ ಆಚರಿಸೋಣ. ದ್ವೇಷ, ವೈರುಧ್ಯಗಳ ಕತ್ತಲು ಕಳೆದು ಎಲ್ಲರೆದೆಯಲ್ಲಿ ಸ್ನೇಹ, ಸೌಹಾರ್ದತೆ, ಭ್ರಾತೃತ್ವದ ಜ್ಯೋತಿ ಬೆಳಗಲಿ ಎಂದು ಹಾರೈಸುತ್ತೇನೆ. ನಾಡಬಂಧುಗಳಿಗೆ ಸ್ವಾತಂತ್ರ‍್ಯೋತ್ಸವದ ಶುಭಕಾಮನೆಗಳು ಎಂದು ಬರೆದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಜೈ ಹಿಂದ್ ಎಂದು ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಟ್ವೀಟ್ ಮಾಡಿ, ಎಲ್ಲಾ ಭಾರತೀಯರಿಗೆ 77ನೇ ಸ್ವಾತಂತ್ರ‍್ಯ ದಿನದ ಹಾರ್ದಿಕ ಶುಭಾಶಯಗಳು. ಈ ಸಂದರ್ಭದಲ್ಲಿ ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸೋಣ ಮತ್ತು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಏಕತೆಗೆ ನಮ್ಮ ಕೊಡುಗೆ ನೀಡೋಣ ಎಂದಿದ್ದಾರೆ.

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಪಂಚಭೂತಗಳ ಸಮತತ್ತ್ವ ಎಷ್ಟು ಆದರ್ಶಪ್ರಾಯವೋ ಭಾರತೀಯ ಸ್ವಾತಂತ್ರ‍್ಯದ ಪರಿಕಲ್ಪನೆ ಅಷ್ಟೇ ಶ್ರೇಷ್ಠ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು, ಮತ್ತಿತರೆ ಅನೇಕ ಮಹಾಪುರುಷರ ತ್ಯಾಗ, ಬಲಿದಾನದ ಮಹಾಫಲವನ್ನು ಜತನದಿಂದ ಕಾಪಾಡಿಕೊಳ್ಳೋಣ. ಭಾರತದ ಸಮಸ್ತ ಬಂಧುಗಳಿಗೆ ಸ್ವಾತಂತ್ರ‍್ಯ ದಿನೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾಗ-2: ಮರೆಯದ ದುರಂತ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ – ಗಾಂಧಿಯುಗದಲ್ಲಿ ಏನೆಲ್ಲಾ ಆಯ್ತು?

Web Stories

Share This Article