ಬೆಂಗಳೂರು: ರಾಜ್ಯದಲ್ಲಿ ಮೈಕ್ ದಂಗಲ್ ಬಳಿಕ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಲು ಪೊಲೀಸರ ಅನುಮತಿ ಕಡ್ಡಾಯ ಮಾಡಲಾಗಿದೆ. ಅದರಂತೆ, ಕೊಟ್ಟ ಗಡುವಿನಲ್ಲಿ ಧಾರ್ಮಿಕ ಕೇಂದ್ರಗಳು ಅನುಮತಿ ಪಡೆದಿವೆ.
Advertisement
ವಿಶೇಷವೆಂದರೆ ಮೈಕ್ ಅನುಮತಿ ಪಡೆದ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ದೇಗುಲಗಳೇ ಅತಿ ಕಡಿಮೆ ಇವೆ. ಮೈಕ್ ಅನುಮತಿ ಪಡೆಯೋದ್ರದಲ್ಲಿ ದೇಗುಲಗಳು ಹಿಂದುಳಿದಿದ್ದು, ಮಸೀದಿ, ಚರ್ಚ್‌ಗಳು ಹೆಚ್ಚಿನ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡಿವೆ. ಬೆಂಗಳೂರಲ್ಲಿ ಸಲ್ಲಿಕೆ ಆಗಿದ್ದ 1,530 ಅರ್ಜಿಗಳ ಪೈಕಿ 797 ಅರ್ಜಿಗಳು ಮಸೀದಿಗಳಿಂದಲೇ ಸಲ್ಲಿಕೆಯಾಗಿವೆ. ಒಟ್ಟು ಅರ್ಜಿಗಳ ಪೈಕಿ 10 ಅರ್ಜಿಗಳು ರದ್ದಾಗಿದ್ದು, 79 ಅರ್ಜಿಗಳು ಇನ್ನೂ ಪರಿಶೀಲನೆ ಹಂತದಲ್ಲಿದೆ. ಇದನ್ನೂ ಓದಿ: ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT
Advertisement
Advertisement
ನಗರದಲ್ಲಿ ಒಟ್ಟು 308 ದೇಗುಲಗಳು ಅರ್ಜಿ ಸಲ್ಲಿಸಿದ್ದು, 295 ದೇಗುಲಗಳು ಅನುಮತಿ ಪಡೆದುಕೊಂಡಿದೆ. ಹಾಗೆಯೇ 797 ಮಸೀದಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, 762 ಮಸೀದಿಗಳು ಅನುಮತಿ ಪಡೆದಿವೆ. 358 ಚರ್ಚ್‌ಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 320 ಚರ್ಚ್‌ಗಳಿಗೆ ಮೈಕ್‌ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.