ಗಾಂಧೀನಗರ: 76 ವರ್ಷಗಳಿಂದ ಆಹಾರ ಹಾಗೂ ನೀರಿಲ್ಲದೆ ಜೀವಿಸಿದ ಪ್ರಹ್ಲಾದ್ ಜಾನಿ ಅಲಿಯಾಸ್ ಚುನರೀವಾಲಾ ಮಾತಾಜಿ ಗುಜರಾತ್‍ನ ಗಾಂಧೀನಗರ ಜಿಲ್ಲೆ ಸ್ವಗ್ರಾಮ ಗ್ರಾಮ ಚರದಾದಲ್ಲಿ ನಿಧನರಾಗಿದ್ದಾರೆ.
90 ವರ್ಷ ಚುನರೀವಾಲಾ ಮಾತಾಜಿ ಗುಜರಾತಿನಾದ್ಯಂತ ಅನುಯಾಯಿಗಳನ್ನು ಹೊಂದಿದ್ದಾರೆ. “ಅಂಬಾ ದೇವಿಯು ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಹೀಗಾಗಿ ಬದುಕಲು ನನಗೆ ಆಹಾರ ಅಥವಾ ನೀರು ಅಗತ್ಯವಿಲ್ಲ” ಎಂದು ಜಾನಿ ಹೇಳುತ್ತಿದ್ದರು.
Advertisement
Advertisement
ಚುನರೀವಾಲಾ ಮಾತಾಜಿ ಅವರ ಪಾರ್ಥಿವ ಶರೀರವನ್ನು ಗುಜರಾತ್‍ನ ಬನಸ್ಕಂತ ಜಿಲ್ಲೆಯ ಅಂಬಾಜಿ ದೇವಸ್ಥಾನದ ಬಳಿ ಇರುವ ಅವರ ವಿನಮ್ರ ಆಶ್ರಮ (ಗುಹೆ)ಯಲ್ಲಿ ಇಡಲಾಗಿದೆ. ಈ ಮೂಲಕ ಎರಡು ದಿನಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Advertisement
“ಮಾತಾಜಿ ಇಚ್ಛೆಯಂತೆ ಕೆಲ ದಿನಗಳ ಹಿಂದೆ ಅವರನ್ನು ಸ್ವಗ್ರಾಮ ಚರದಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿಯೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಗೌರವ ಸಲ್ಲಿಸಲು ಭಕ್ತರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಆಶ್ರಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗುರುವಾರ ಆಶ್ರಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಶಿಷ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
ಯೋಗಿ ಜಾನಿ ಅಂಬಾ ದೇವಿಯ ಧರ್ಮನಿಷ್ಠರಾಗಿದ್ದರು. ಅವರು ಮಹಿಳೆಯಂತೆ ಯಾವಾಗಲೂ ಕೆಂಪು ಸೀರೆ (ಚುನ್ರಿ) ಧರಿಸುತ್ತಿದ್ದರು. ಹೀಗಾಗಿ ಅವರಿಗೆ ಚುನರೀವಾಲಾ ಮಾತಾಜಿ ಎಂದು ಕರೆಯಲಾಗುತ್ತಿತ್ತು.
ಜಾನಿ ಚಿಕ್ಕ ವಯಸ್ಸಿನಲ್ಲಿ ಅಂಬಾಜಿ ದೇವಸ್ಥಾನದ ಬಳಿ ಒಂದು ಸಣ್ಣ ಗುಹೆಯನ್ನು ನಿರ್ಮಿಸಿ ಅಲ್ಲಿ ವಾಸಿಸುತ್ತಿದ್ದರು. 14ನೇ ವಯಸ್ಸಿನಲ್ಲಿಯೇ ನೀರು, ಆಹಾರ ಸೇವನೆ ಬಿಟ್ಟಿದ್ದ ಅವರು 76 ವರ್ಷಗಳಿಂದ ಗಾಳಿಯಿಂದ ಮಾತ್ರ ಜೀವಿಸುತ್ತಿದ್ದರು. ಅವರನ್ನು ವಿಜ್ಞಾನಿಗಳು 2003ರಿಂದ 2010ರವರೆಗೂ ಪರೀಕ್ಷಿಸಿದ್ದರು.