– ಪರೇಡ್‌ನಲ್ಲಿ ‘ನಾರಿ ಶಕ್ತಿ’
ನವದೆಹಲಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಕರ್ತವ್ಯ ಪಥದಲ್ಲಿ ನಡೆದ ಪಥಸಂಚಲನದಲ್ಲಿ ‘ನಾರಿ ಶಕ್ತಿ’ ಮಿಂಚಿತು. ಕರ್ನಾಟಕದ ನಾರಿಯರು ಪಾಲ್ಗೊಂಡು ಗಮನ ಸೆಳೆದಿದ್ದಾರೆ.
Advertisement
ಹೌದು, ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ NCC ಪಥಸಂಚಲನದ ನೇತೃತ್ವವನ್ನು ಕೊಡಗಿನ ಪುಣ್ಯಾ ಪೊನ್ನಮ್ಮ (Punnya Ponnamma) ವಹಿಸಿದ್ದರು. ಇದು ನಾಡಿಗೆ ಹೆಮ್ಮೆ ಎನಿಸಿದೆ. ಇದನ್ನೂ ಓದಿ: 75th Republic Day: M-29 ಯುದ್ಧ ವಿಮಾನ ಹಾರಾಟ ನಡೆಸಿ ಮಿಂಚಿದ ಕೊಡಗಿನ ಪುಣ್ಯಾ ನಂಜಪ್ಪ
Advertisement
Advertisement
ಕರ್ತವ್ಯ ಪಥದಲ್ಲಿ ನಡೆದ 90 ನಿಮಿಷಗಳ ಪರೇಡ್‌ನಲ್ಲಿ ದೇಶದ ನಾರಿ ಶಕ್ತಿ ಅನಾವರಣಗೊಂಡಿತು. ದೇಶದ ಮೂರು ಸೇನೆಗಳ ಮಹಿಳಾ ತುಕಡಿಗಳು ಮೊಟ್ಟ ಮೊದಲ ಬಾರಿಗೆ ಪರೇಡ್‌ನಲ್ಲಿ ಪಾಲ್ಗೊಂಡಿದ್ದವು.
Advertisement
ಪರೇಡ್ ಸಂದರ್ಭದಲ್ಲೇ 15 ಮಹಿಳಾ ಪೈಲೆಟ್‌ಗಳನ್ನು ಒಳಗೊಂಡ ಭಾರತೀಯ ವಾಯುಪಡೆಯ ವಿಮಾನಗಳು ಫ್ಲೈ ಪಾಸ್ಟ್ ನಡೆಸಿ ಗಮನ ಸೆಳೆದವು. ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಮಿಂಚಿದ ʻರಾಕೆಟ್ ಗರ್ಲ್ʼ – ಚಂದ್ರಯಾನ-3 ಸಕ್ಸಸ್‌ನಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ನೆನಪಿಸಿದ ಟ್ಯಾಬ್ಲೊ