DistrictsGadagKarnatakaLatestMain Post

ಧ್ವಜಾರೋಹಣ ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನ – 45 ನಿಮಿಷದ ಗ್ಯಾಪ್‍ನಲ್ಲಿ ಖದೀಮರು ಎಸ್ಕೇಪ್

ಗದಗ: ಇಂದು ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಇತ್ತ ಎಲ್ಲರೂ ಧ್ವಜಾರೋಹಣಕ್ಕೆಂದು ಹೋಗಿದ್ದ ವೇಳೆ ಜಿಲ್ಲೆಯ ಮನೆಯೊಂದರಲ್ಲಿ ಹಾಡ ಹಗಲೇ ಕಳ್ಳತನ ನಡೆದಿದೆ.

ನಗರದ ಸಿದ್ಧಲಿಂಗ ನಗರದ ಬಸವರಾಜ ರಾಯಪೂರ ಎಂಬುವರ ಮನೆಯಲ್ಲಿ ಹಾಡ ಹಗಲೇ ಕಳ್ಳತನವಾಗಿದೆ. ಮನೆಯ ದಂಪತಿ ಬೆಳಗ್ಗೆ 8 ಗಂಟೆ ನಂತರ ಪಕ್ಕದ ಬೀದಿಯ ಸಾರ್ವಜನಿಕ ಉದ್ಯಾನವನದಲ್ಲಿ ಧ್ವಜಾರೋಹಣಕ್ಕೆಂದು ಹೋಗಿದ್ದರು. ಧ್ವಜಾರೋಹಣ ಮುಗಿಸಿ 9 ಗಂಟೆ ಒಳಗೆ ವಾಪಾಸ್ ಬಂದಿದ್ದಾರೆ. ಆ 45 ನಿಮಿಷದ ಗ್ಯಾಪ್‍ನಲ್ಲಿ ಖದೀಮರು ಮನೆ ದೋಚಿ ಎಸ್ಕೇಪ್ ಆಗಿದ್ದಾರೆ. ಹಿಂದಿನ ಬಾಗಿಲಿನ ಕೊಂಡಿ ಮುರಿದು ಸುಮಾರು 5 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದೆ. ಇದನ್ನೂ ಓದಿ: ಯೋಧರಿಂದ್ಲೇ ಧ್ವಜಾರೋಹಣ ಮಾಡಿಸಿ ಸಂಭ್ರಮಿಸಿದ ಇಡೀ ಗ್ರಾಮ

ಚಿನ್ನದ ಬಳೆ, ಮಾಂಗಲ್ಯ ಸರ, ಕಿವಿಯೋಲೆ, ಲಾಂಗ್ ಚೈನ್, ಉಂಗುರ ಹೀಗೆ ಅನೇಕ ಚಿನ್ನಾಭರಣಗಳನ್ನು ದೋಚಿದ್ದಾರೆ. ಬೆಳ್ಳಿಯ ಸಾಮಾನುಗಳನ್ನು ಮುಟ್ಟದೇ ಕೇವಲ ಬಂಗಾರ ಹಾಗೂ ಹಣ ಮಾತ್ರ ಕಳ್ಳತನವಾಗಿದೆ. ಮನೆಯ ಸಿ.ಸಿ ಕ್ಯಾಮೆರಾ ಆಫ್ ಆಗಿದೆ. ಧ್ವಜಾರೋಹಣ ಮುಗಿಸಿ 45 ನಿಮಿಷದಲ್ಲಿ ಮನೆಗೆ ಮರಳಿ ಬಂದು ನೋಡಿದಾಗ ಹಿಂದಿನ ಬಾಗಿಲು ತೆರದಿದ್ದು ನೋಡಿ ಶಾಕ್ ಆಗಿದೆ. ಬೆಡ್ ರೂಮ್, ಮಹಡಿ ಮನೆಯ ಬೆಡ್ ರೂಮ್ ಕಪಾಟು ತೆರದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು. ಸ್ಥಳಕ್ಕೆ ಶಹರ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಡ ಹಗಲೇ ನಗರದ ಹೃದಯ ಭಾಗದ ಮುಖ್ಯ ಬೀದಿಯ ಮನೆ ಕಳ್ಳತನ ಆಗಿರುವುದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನದಂದೇ ರೈತರ ಪ್ರತಿಭಟನೆ – ದರದರನೆ ಎಳೆದೊಯ್ದ ಪೊಲೀಸರು

Live Tv

Leave a Reply

Your email address will not be published.

Back to top button