ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಶೇ.72.13 ರಷ್ಟು ಮತದಾನ ನಡೆಯವ ಮೂಲಕ ಕರ್ನಾಟಕದಲ್ಲಿ ದಾಖಲೆ ನಿರ್ಮಾಣವಾಗಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಅಧಿಕಾರಿ ಉಮೇಶ್ ಸಿನ್ಹಾ, ಅವರು 2009ರಲ್ಲಿ 68%, 2013ರಲ್ಲಿ 71% ಮತದಾನ ನಡೆದಿತ್ತು. ಈ ಬಾರಿ 2,65,731 ಪೋಸ್ಟಲ್ ಮತದಾನ ನಡೆದಿದ್ದು ಸಂಜೆ 6 ಗಂಟೆಯ ವೇಳೆಗೆ ಶೇ.72.13 ರಷ್ಟು ಮತದಾನ ನಡೆದಿದೆ.
ಸಿಎನ್ ಆರ್ ರಾವ್, ರಾಹುಲ್ ದ್ರಾವಿಡ್, ಚಂದ್ರಶೇಖರ ಕಂಬಾರ ಮತ್ತಿತರನ್ನು ರಾಯಭಾರಿಗಳಾಗಿ ಬಳಸಿಕೊಳ್ಳಲಾಗಿತ್ತು. ಚುನಾವಣಾ ಸಿಬ್ಬಂದಿ ಮತ್ತು ಪೊಲೀಸ್ ರಿಗೆ ಅಭಿನಂದನೆಯನ್ನು ಸಲ್ಲಿಸಿದರು.
222 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಎರಡು ಕ್ಷೇತ್ರದಲ್ಲಿ ಮತದಾನ ನಡೆದಿಲ್ಲ. ಜಯನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಜಯನಗರ ಕ್ಷೇತ್ರದ ಮತದಾನದ ದಿನಾಂಕವನ್ನು ತಕ್ಷಣವೇ ತಿಳಿಸಲಾಗುವುದು ಎಂದು ಹೇಳಿದರು.
57,416 ಮತದಾನ ಕೇಂದ್ರಗಳಲ್ಲಿ ಮತದಾನ ನಡೆದಿದೆ. 57,786 ವಿವಿ ಪ್ಯಾಟ್ ಗಳನ್ನು ಬಳಸಲಾಗಿದೆ. 698 ವಿವಿ ಪ್ಯಾಟ್ ಗಳನ್ನು ವಾಪಸ್ಸು ಪಡೆಯಲಾಗಿದೆ. 186 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲೂ ಹಣಬಲದ ಪಾತ್ರ ಜೋರಾಗಿಯೇ ಕಂಡುಬಂದಿದೆ. ಒಟ್ಟು ರೂ. 186 ಕೋಟಿ ಮೌಲ್ಯದ ಹಣ, ಮದ್ಯ ಮತ್ತು ಇನ್ನಿತರ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದೇಶದ ಯಾವುದೇ ಚುನಾವಣೆಯಲ್ಲೂ ಇಷ್ಟು ದೊಡ್ಡ ಮೌಲ್ಯದ ನಗದು, ಮದ್ಯ ಹಾಗೂ ಇನ್ನಿತರ ಅಮಿಷವೊಡ್ಡುವ ವಸ್ತುಗಳನ್ನು ವಶಪಡಿಸಿಕೊಂಡ ನಿದರ್ಶನ ಇಲ್ಲ. ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕರ್ನಾಟಕದಲ್ಲಿ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಮಾಣ 6% ಹೆಚ್ಚಳವಾಗಿದೆ. 2013ರ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ ಶೇ.8ರಷ್ಟು ಹೆಚ್ಚಳವಾಗಿದೆ. ಕಳೆದ ಉತ್ತರ ಪ್ರದೇಶ ಚುನಾವಣೆಯಲ್ಲಿ 150 ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.