CricketLatestMain PostSports

7+18 ಜೊತೆಯಾಗಿ ಆಡಿದ್ದು ನನ್ನ ವೃತ್ತಿ ಜೀವನದ ಆನಂದದಾಯಕ ಕ್ಷಣ: ಧೋನಿ ನೆನೆದ ಕೊಹ್ಲಿ

ದುಬೈ: ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಾಗಿ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಏಷ್ಯಾಕಪ್‌ಗೂ ಮುನ್ನ ನೆನಪಿಸಿಕೊಂಡಿದ್ದಾರೆ.

 

ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಈ ವ್ಯಕ್ತಿಯೊಂದಿಗೆ ವಿಶ್ವಾಸಾರ್ಹ ಉಪನಾಯಕನಾಗಿ ಆಡಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ. ನಾವಿಬ್ಬರು ಜೊತೆಯಾಗಿ ಆಡಿದ ಜೊತೆಯಾಟ ಯಾವತ್ತು ನನಗೆ ವಿಶೇಷ. ಜೀವನ ಪೂರ್ತಿ ಮರೆಯುವುದಿಲ್ಲ. 7+18 ಎಂದು ಬರೆದುಕೊಂಡು ಹಾರ್ಟ್ ಸಿಂಬಲ್ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಂದುಕೊಂಡಂತೆ ನಡೆದರೆ ಮುಂದಿನ ಮೂರು ಭಾನುವಾರ ಇಂಡೋ-ಪಾಕ್ ಫೈಟ್ ಗ್ಯಾರಂಟಿ

ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಧೋನಿಯನ್ನು ನೆನಪಿಸಿಕೊಂಡ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಭಾರತ ಪರ ಆಡುವಾಗ ಧೋನಿ ಮತ್ತು ಕೊಹ್ಲಿ ಅದೇಷ್ಟೋ ಪಂದ್ಯಗಳನ್ನು ಜೊತೆಯಾಗಿ ಆಡಿ ಗೆಲ್ಲಿಸಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಧೋನಿ ಗರಡಿಯಲ್ಲಿ ಪಳಗಿದ ಆಟಗಾರ. ಧೋನಿ ಟೀಂ ಇಂಡಿಯಾದಲ್ಲಿದ್ದಾಗಲೇ ನಾಯಕತ್ವ ತ್ಯಜಿಸಿ ಕೊಹ್ಲಿಗೆ ಪಟ್ಟ ಕಟ್ಟಿದ್ದರು. ಇದನ್ನೂ ಓದಿ: ಏಷ್ಯಾಕಪ್ ಚೊಚ್ಚಲ ಆವೃತ್ತಿಯಲ್ಲಿ ಭಾರತ ಚಾಂಪಿಯನ್ – ಎರಡನೇ ಆವೃತ್ತಿ ಆಡಲೇ ಇಲ್ಲ ಟೀಂ ಇಂಡಿಯಾ!

ಇದಲ್ಲದೇ ಧೋನಿ ಮತ್ತು ಕೊಹ್ಲಿ ಇಬ್ಬರು ಕೂಡ ವಿಕೆಟ್ ಮಧ್ಯೆ ವೇಗವಾಗಿ ಓಡಿ ರನ್ ಕದಿಯುದರಲ್ಲಿ ಹೆಸರವಾಸಿಯಾಗಿದ್ದರು. ಇವರಿಬ್ಬರೂ ಕೂಡ ವಿಶ್ವಕ್ರಿಕೆಟ್ ಅಭಿಮಾನಿಗಳನ್ನು ತಮ್ಮ ಜೊತೆಯಾಟದ ಮೂಲಕ ರಂಜಿಸಿದ್ದಾರೆ. 2020ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರೆ, ಕೊಹ್ಲಿ ಸದ್ಯ ಟೀಂ ಇಂಡಿಯಾದಲ್ಲಿದ್ದರೂ, ಈ ಹಿಂದಿನ ಬ್ಯಾಟಿಂಗ್ ಲಯದಲ್ಲಿಲ್ಲ.

ಇದೀಗ ಕೆಲ ಸರಣಿಗಳಿಂದ ವಿಶ್ರಾಂತಿ ಪಡೆದು ಮತ್ತೆ ಏಷ್ಯಾಕಪ್‍ಗಾಗಿ ಟೀಂ ಇಂಡಿಯಾ ಸೇರಿಕೊಂಡಿರುವ ಕೊಹ್ಲಿ ಆಟದ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೊಹ್ಲಿ ಮೂರಂಕಿ ರನ್ ಹೊಡೆಯದೆ ಎರಡು ವರ್ಷ ಕಳೆದಿದೆ. ಹಾಗಾಗಿ ಏಷ್ಯಾಕಪ್‍ನಲ್ಲಿ ಕೊಹ್ಲಿಯ ಹಳೆಯ ಖದರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Live Tv

Leave a Reply

Your email address will not be published.

Back to top button