ಬೆಂಗಳೂರು: ನವೆಂಬರ್ 8 ರಂದು ನೋಟ್ ಬ್ಯಾನ್ ಮಾಡಿ ಒಂದು ವರ್ಷವಾಗುತ್ತದೆ. ಆದ್ದರಿಂದ ಕಪ್ಪು ಹಣ ವಿರೋಧಿ ದಿನವನ್ನು ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಅದರ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಸರ್ಕಾರಕ್ಕೆ ತೆರಿಗೆ ವಂಚಿಸಿ 19 ವಿದೇಶ ರಾಷ್ಟ್ರಗಳಲ್ಲಿ ಅಕ್ರಮ ಹೂಡಿಕೆ ಮಾಡಿರುವವರ ಪಟ್ಟಿಯನ್ನು ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. 96 ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಜಂಟಿಯಾಗಿ 10 ತಿಂಗಳುಗಳ ಕಾಲ ನಡೆಸಿದ ತನಿಖಾ ಪತ್ರಿಕೋದ್ಯಮದಲ್ಲಿ ಸುಮಾರು 1 ಕೋಟಿ ದಾಖಲೆಗಳನ್ನು ಕಲೆಹಾಕಲಾಗಿದೆ. ಇದರಲ್ಲಿ 180 ರಾಷ್ಟ್ರಗಳ ಕಾಳ ಧನಿಕರು, ಕಡಲಿನಾಚೆಗಿನ ತೆರಿಗೆ ಸ್ವರ್ಗ ಎಂದು ಕರೆಸಿಕೊಳ್ಳುವ 19 ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿರುವ ಮಹತ್ವದ ಮಾಹಿತಿ ಬಯಲಾಗಿದೆ.
Advertisement
Advertisement
180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 19ನೇ ಸ್ಥಾನದಲ್ಲಿದ್ದು, ಇಲ್ಲಿನ 714 ಮಂದಿ ಅಕ್ರಮ ಹೂಡಿಕೆಯಲ್ಲಿ ಭಾಗಿಯಾಗಿರುವುದಾಗಿ ಮಾಧ್ಯಮ ವರದಿ ಮಾಡಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರರು, ಕ್ಯಾಬಿನೆಟ್ ಸದಸ್ಯರು ಹಾಗೂ ಪಕ್ಷದ ದೇಣಿಗೆದಾರರು ಸೇರಿದಂತೆ 13 ಮಂದಿ ಪ್ಯಾರಡೈಸ್ ಪೇಪರ್ಸ್ ನ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ನಂದ್ ಲಾಲ್ ಕೆಮ್ಕಾ ಮಾಲೀಕತ್ವದ ಸನ್ ಗ್ರೂಪ್, ಪಟ್ಟಿಯಲ್ಲಿ 2ನೇ ಅತಿದೊಡ್ಡ ಹೂಡಿಕೆದಾರನಾಗಿರುವುದು ವರದಿಯಲ್ಲಿ ಬಯಲಾಗಿದೆ.
Advertisement
Advertisement
18 ತಿಂಗಳ ಬಳಿಕ ಪ್ಯಾರಡೈಸ್ ಪೇಪರ್ಸ್ ಬಿಡುಗಡೆ:
* ಜಾರ್ಖಂಡ್‍ನ ಹಝರಿಬಾಗ್ ಕ್ಷೇತ್ರದ ಸಂಸದ ಹಾಗೂ ಕೇಂದ್ರದ ರಾಜ್ಯ ಸಚಿವರೂ ಆಗಿರುವ ಜಯಂತ್ ಸಿಂಹ, ಒಮಿದಿಯಾರ್ ನೆಟ್‍ವರ್ಕ್ ಕಂಪನಿಯ ವ್ಯವಸ್ಥಪಾಕ ನಿರ್ದೇಶಕ. ಅಮೆರಿಕ ಮೂಲದ ಡಿ ಲೈಟ್ ಕಂಪನಿಯಲ್ಲಿ ಒಮಿದಿಯಾರ್ ನೆಟ್‍ವರ್ಕ್ ಹೂಡಿಕೆ ಮಾಡಿದ್ದು, ಕೆರಿಬಿಯನ್ ಸಮುದ್ರದಲ್ಲಿನ ಕೇಮನ್ ದ್ವೀಪಗಳಲ್ಲಿ ಡಿ. ಲೈಟ್ ಹೂಡಿಕೆ ಮಾಡಿದೆ. ಚುನಾವಣೆಗೆ ಸ್ಪರ್ಧಿಸುವ ವೇಳೆ ಯಾವುದೇ ಕಂಪನಿಯ ಮಾಲಿಕತ್ವ ಅಥವಾ ಶೇರ್ ಹೊಂದಿರುವ ಕುರಿತು ಜಯಂತ್ ಸಿಂಹ ನಮೂದಿಸಿಲ್ಲ.
* ನಸ್ಜಯ್ ಕಂಪನಿ ಲಿಮಿಟೆಡ್, – 2010ರಲ್ಲಿ ಬಹಾವi ದೇಶದಲ್ಲಿ ನೋಂದಣಿಯಾಗಿರುವ ಈ ಕಂಪನಿಗೆ ಬಾಲಿವುಡ್ ನಟ ಸಂಜಯ್ ದತ್ ವ್ಯವಸ್ಥಾಪಕ ನಿರ್ದೇಶಕ.
* ಸಿಲ್ವರ್ಲೈನ್ ಎಸ್ಟೇಟ್ ಲಿಮಿಟೆಡ್ – 2016ರಲ್ಲಿ ಡೊಮಿನಿಕಾದಲ್ಲಿ ನೋಂದಣಿಯಾಗಿರುವ ಈ ಕಂಪನಿಗೆ ಜಲಂಧರ್ ಮೂಲದ ಪವಿತ್ರಾ ಸಿಂಗ್ ಉಪ್ಪಲ್ ನಿರ್ದೇಶಕಿ.