ನವದೆಹಲಿ: 70ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನೆಲೆ ದೆಹಲಿಯ ಕರ್ನಾಟಕ ಭವನದಲ್ಲಿ (Karnataka Bhavana) ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ (TB Jayachandra) ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಭಾಗಿಯಾಗಿ ನಾಡದೇವಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಗೀತೆ ಹಾಡಿದರು. ಇದನ್ನೂ ಓದಿ: Women’s World Cup | ವಿಶ್ವಕಪ್ ಗೆದ್ದರೆ ಭಾರತ ಮಹಿಳಾ ತಂಡಕ್ಕೂ 125 ಕೋಟಿ ಬಹುಮಾನ?
ಈ ಸಂದರ್ಭದಲ್ಲಿ ಕರ್ನಾಟಕ ಭವನದ ನಿವಾಸಿ ಆಯುಕ್ತರು ಎಂ.ಇಮ್ ಕೊಂಗ್ಲ ಜಮೀರ್, ಅಪರ ನಿವಾಸಿ ಆಯುಕ್ತರು ಆಕೃತಿ ಬನ್ಸಾಲ, ಸಹಾಯಕ ನಿವಾಸಿ ಆಯುಕ್ತ ಸಿ. ಮೋಹನ್ ಕುಮಾರ್ ಹಾಗೂ ಕರ್ನಾಟಕ ಭವನದ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು. ಇದನ್ನೂ ಓದಿ: ಅಕ್ಕನ ಸ್ಥಾನದಲ್ಲಿ ನಿಂತು ಪ್ರತಾಪ್ ಸಿಂಹ, ಪ್ರದೀಪ್ ಈಶ್ವರ್‌ಗೆ ಕಿವಿಮಾತು ಹೇಳ್ತೀನಿ: ಲಕ್ಷ್ಮೀ ಹೆಬ್ಬಾಳ್ಕರ್
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯೋತ್ಸವ ಸಂಭ್ರಮ:
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆ ಹಾಗೂ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆ ವತಿಯಿಂದ ಜಂಟಿಯಾಗಿ ಏರ್ಪಡಿಸಲಾಗಿದ್ದ 70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಗೆ ನೂರು ವರ್ಷ ಪೂರೈಸಿದ ಹಿನ್ನೆಲೆ ಕನ್ನಡ ಮತ್ತು ಕನ್ನಡೇತರ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ನಾಡಗೀತೆ ಹಾಡುವ ಮೂಲಕ ವಿಶಿಷ್ಟವಾಗಿ ಸಂಭ್ರಮಿಸಿದರು. ಇದನ್ನೂ ಓದಿ: 5 ಗ್ಯಾರಂಟಿಗಳಿಂದ ಅನುದಾನ ಸಿಗೋದು ಕಷ್ಟ ಆಗಿದೆ, ಶಾಸಕರು ಕಾಲಿಗೆ ಬಿದ್ದು ಕೇಳ್ತಿದ್ದಾರೆ: ಜಮೀರ್ ಅಹಮದ್
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯ ನಿರ್ದೇಶಕಿಯರಾದ ರಾಜೇಶ್ವರಿ ಎಸ್‌ಎಂ ಹಾಗೂ ಜನ ಜಾತಿಯ ಕಾರ್ಯ ಮಂತ್ರಾಲಯದ ನಿರ್ದೇಶಕರಾದ ಶಿವಾನಂದ್ ಬಾಚಗುಂಡಿ, ಐಇಎಸ್ ಆಗಮಿಸಿದ್ದರು. ಸಂಸ್ಥೆಯ ಹಿರಿಯ ಸದಸ್ಯರಾದ ವಸಂತ್ ಶೆಟ್ಟಿ ಬಳ್ಳಾರಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ: ಸಿಎಂ ಬೇಸರ
ಇದೇ ಸಂದರ್ಭದಲ್ಲಿ ರಾಜೇಶ್ವರಿ ಎಸ್‌ಎಂ ಮಾತನಾಡಿ, ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಇತ್ತೀಚಿಗೆ ಅವರು ಜೆಎನ್‌ಯು ಭಾಷಾ ವಿಭಾಗಕ್ಕೆ ಹೋಗಿದ್ದಾಗ ಅಲ್ಲಿ ಚೀನೀ ಭಾಷೆ ಬೆಳೆಸಲು ಮತ್ತು ಪಸರಿಸಲು ಅಲ್ಲಿನ ಸರ್ಕಾರ ಹೇಗೆ ಪ್ರಾಮುಖ್ಯತೆ ನೀಡುತ್ತಿದೆ ಎಂಬುದನ್ನು ಸ್ಮರಿಸಿ ಅದೇ ರೀತಿ ಕನ್ನಡವನ್ನು ಬೆಳೆಸಲು ಕರ್ನಾಟಕ ಸರ್ಕಾರ ಮುಂದಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಇದನ್ನೂ ಓದಿ: Stampede | ಅನುಮತಿಯಿಲ್ಲದೇ ಏಕಾದಶಿ ಆಚರಣೆ ಮಾಡಿದ್ದೇ ದುರಂತಕ್ಕೆ ಕಾರಣವಾಯ್ತಾ?
ಶಿವಾನಂದ್ ಮಾತನಾಡಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯವರಿಗಿಂತ ಮುಂಚೆಯೇ ಕನ್ನಡದ ಹೆಮ್ಮೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಹೋರಾಡಿ ಜಯ ಸಾಧಿಸಿದ ಬಗ್ಗೆ ವಿಸ್ಪಿತವಾಗಿ ವಿವರಿಸಿ ಶಾಲೆಯ ಮಕ್ಕಳಿಗೆ ಹೇಳಿದರು. ಇದನ್ನೂ ಓದಿ: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ – ದೇವಸ್ಥಾನದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸುಧೀಶ್ ಕುಮಾರ್ ಅರೆಸ್ಟ್
ಸಂಸ್ಥೆಯ ಗೌರವ ಖಜಾಂಚಿ ಹಾಗೂ ಪ್ರಭಾರ ಕಾರ್ಯದರ್ಶಿಗಳಾದ ಕಾಶಿನಾಥ್ ಬಿರಾದರ್ ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ವಂದನಾಪರ್ಣೆ ಮಾಡಿ, ವ್ಯವಸ್ಥಾಪಕರಾದ ಉಮೇಶ್ ಬಿಆರ್ ಹಿತನುಡಿದರು. ಹಾಗೂ ಅರವಿಂದ ಬಿಜೈ ನಿರೂಪಣೆ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ವೀಣಾ ಜಗದೀಶ್, ಸದಸ್ಯರಾದ ಗಿರೀಶ್ ಎಸ್, ಹರಿಪ್ರಿಯ, ಮೋಹನ್ ಕುಮಾರ್ ಹಾಗೂ ಡಾ.ಅಶೋಕ್ ಗೋನಾಳ ಉಪಸ್ಥಿತರಿದ್ದರು. ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ – ಡಿಸಿಎಂ ಪರ ಸಚಿವ ಎಂ.ಸಿ ಸುಧಾಕರ್ ಬ್ಯಾಟಿಂಗ್



