ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ತಮ್ಮ ಸಹಸ್ಪರ್ಧಿಯರಿಗೆ ಹಾಡು ಬರೆದು ಅವರಿಗಾಗಿ ಹಾಡುತ್ತಿದ್ದರು. ಆಶಿತ, ನಿವೇದಿತಾ, ಅನುಪಮ, ಕೃಷಿ ತಾಪಂಡ, ಶೃತಿ ಪ್ರಕಾಶ್ ಅವರಿಗೆ ಹಾಡುಗಳನ್ನು ಬರೆದು ಹಾಡುತ್ತಿದ್ದರು. ಇದೀಗ ಚಂದನ್ ಶೆಟ್ಟಿಗೆ 7 ವರ್ಷದ ಬಾಲಕಿ ರ‍್ಯಾಪ್ ಸಾಂಗ್ ಹಾಡಿದ್ದಾರೆ.
7ರ ಬಾಲಕಿ ಮಾನ್ಯ ಹರ್ಷ ಗೆ ಚಂದನ್ ಎಂದರೆ ತುಂಬಾ ಇಷ್ಟ. ಚಂದನ್ ಶೆಟ್ಟಿಗಾಗಿಯೇ ಒಂದು ಹಾಡನ್ನು ಮಾಡಿ ಅದನ್ನ ರ‍್ಯಾಪ್ ಸ್ಟೈಲ್‍ನಲ್ಲೇ ಹಾಡಿ ಯೂಟ್ಯೂಬ್‍ನಲ್ಲಿ ಹೊಸ ಸೆನ್ಸೇಶನ್ ಸೃಷ್ಟಿ ಮಾಡಿದ್ದಾಳೆ.
Advertisement
Advertisement
ಮಾನ್ಯ ಸ್ವತಃ ಸಾಹಿತ್ಯ ರಚಿಸಿ ಚಂದನ್‍ಗಾಗಿ ರ‍್ಯಾಪ್ ಸ್ಟೈಲ್‍ನಲ್ಲಿಯೇ ಹಾಡನ್ನು ಹಾಡಿದ್ದಾರೆ. ಮಾನ್ಯಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂದರೆ ತುಂಬ ಇಷ್ಟ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಹಾಗೂ ನಿವೇದಿತಾ ಗೌಡರನ್ನು ನೋಡಿ ಅವರಂತೆಯೇ ಮಿಮಿಕ್ರಿ ಮಾಡುತ್ತಾಳೆ.
Advertisement
ಸದ್ಯ ಮಾನ್ಯ 2ನೇ ತರಗತಿ ಓದುತ್ತಿದ್ದು, ಇಂಗ್ಲೀಷ್ ಪದ್ಯಗಳನ್ನು ಬರೆಯುತ್ತಾಳೆ. ಅಷ್ಟೇ ಅಲ್ಲದೇ ಡ್ಯಾನ್ಸ್, ಆ್ಯಕ್ಟಿಂಗ್, ಫ್ಯಾಶನ್ ಹಾಗೂ ಮಿಮಿಕ್ರಿಯಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾಳೆ. ಮಿಮಿಕ್ರಿ ಮಾಡುವುದರಿಂದ ಈಕೆಗೆ ಜೂನಿಯರ್ ನಿವೇದಿತಾ ಎಂದು ಕರೆಯುತ್ತಾರೆ.
Advertisement
https://www.youtube.com/watch?v=p6hllcCTRWM