ಸಫಾರಿ ತೆರಳುತ್ತಿದ್ದ ವೇಳೆ ಘೇಂಡಾಮೃಗಗಳ ದಾಳಿ – 7 ಮಂದಿ ಪ್ರವಾಸಿಗರಿಗೆ ಗಾಯ

Public TV
1 Min Read
West Bengal Rhinos Attack

ಕೋಲ್ಕತ್ತಾ: ಸಫಾರಿ (Safari) ತೆರಳುತ್ತಿದ್ದ ವೇಳೆ ಪ್ರವಾಸಿಗರ (Tourists) ಮೇಲೆ ಘೇಂಡಾಮೃಗಗಳು (Rhino) ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಜಲ್ದಪರಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಘಟನೆಯಲ್ಲಿ 7 ಪ್ರವಾಸಿಗರು ಗಾಯಗೊಂಡಿದ್ದಾರೆ.

ಸ್ಥಳೀಯರ ಪ್ರಕಾರ ಸಫಾರಿ ಜೀಪ್ ಅನ್ನು ನಿಲ್ಲಿಸಿದ್ದ ವೇಳೆ 2 ಘೇಂಡಾಮೃಗಗಳು ರಸ್ತೆಯ ಬಳಿ ಪೊದೆಯಲ್ಲಿ ಕಾಳಗದಲ್ಲಿ ತೊಡಗಿದ್ದವು. ಈ ಸಂದರ್ಭ ಪ್ರವಾಸಿಗರು ಪ್ರಾಣಿಗಳ ಕಾದಾಟದ ವೀಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ. ಇದರಿಂದ ವಿಚಲಿತವಾಗಿದ್ದ ಘೇಂಡಾಮೃಗಗಳು ಜೀಪಿನತ್ತ ಬಂದಿವೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ ನಿರಾಕರಿಸಿದ್ದಕ್ಕೆ ಶಾಲಾ ಕಟ್ಟಡವನ್ನೇ ಧ್ವಂಸಗೊಳಿಸಿದ ವಿದ್ಯಾರ್ಥಿಗಳು

ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರವಾಸಿಗರು ಸಫಾರಿ ವಾಹನವನ್ನು ನಿಲ್ಲಿಸಿ, ಘೇಂಡಾಮೃಗಗಳ ಕಾಳಗ ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅವು ಜೀಪಿನತ್ತ ನುಗ್ಗಿವೆ. ಈ ವೇಳೆ ಜೀಪಿನ ಚಾಲಕ ವಾಹನವನ್ನು ರಿವರ್ಸ್ ಕೊಂಡೊಯ್ದಿದ್ದಾನೆ. ಆದರೆ ಜೀಪ್ ಹಿಂದೆ ಹೋಗುತ್ತಲೇ ಮಾರ್ಗದಿಂದ ಬದಿಗೆ ಜಾರಿ, ಕಂದಕಕ್ಕೆ ಉರುಳಿದೆ. ಇದರಿಂದ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

ಗಾಯಗೊಂಡ ಎಲ್ಲಾ ಪ್ರವಾಸಿಗರನ್ನು ತಕ್ಷಣ ಸ್ಥಳೀಯ ಮದರಿಹತ್ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆಯಿಂದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಅಲಿಪುರ್ದೂರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಇಲ್ಲಿಯವರೆಗೆ ಘೇಂಡಾಮೃಗಗಳು ಪ್ರವಾಸಿಗರ ವಾಹನಗಳ ಮೇಲೆ ದಾಳಿ ಮಾಡಿರುವುದು ಈ ಹಿಂದೆ ವರದಿಯಾಗಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *