ಗದಗ: ಪರೀಕ್ಷಾ ಕೊಠಡಿಯಲ್ಲಿ ಹಿಜಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಅಮಾನತು ಮಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ನಗರದ ಸಿ.ಎಸ್. ಪಾಟೀಲ ಪ್ರೌಢಶಾಲೆಯಲ್ಲಿ ಮಾರ್ಚ್ 28 ರಂದು ನಡೆದಿದ್ದ ಪ್ರಥಮ ಭಾಷೆ ಪರೀಕ್ಷೆ ವೇಳೆ ಹಿಜಬ್‍ಗೆ ಅವಕಾಶ ನೀಡಲಾಗಿತ್ತು. ಪರೀಕ್ಷಾ ಕೊಠಡಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ವೇಳೆ ಹಿಜಬ್, ಬುರ್ಖಾ ಧರಿಸಿದ್ದ ಕೆಲ ವಿದ್ಯಾರ್ಥಿನಿಯರು ಬಂದಿದ್ದರು.
Advertisement
Advertisement
ಈ ವೇಳೆ ಅಲ್ಲಿನ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಶಿಕ್ಷಕರು ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆ ಐವರು ಮೇಲ್ಚಿಚಾರಕರು, ಇಬ್ಬರು ಅಧೀಕ್ಷಕರು ಸೇರಿ 7 ಜನರ ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಚಾಲೆಂಜ್ ಮಾಡೋದಾದ್ರೆ ಮುಸ್ಲಿಂ ದೇಶಗಳಿಂದ ಪೆಟ್ರೋಲ್, ಡೀಸೆಲ್ ತರಿಸ್ಕೋಬೇಡಿ: ಟಿಪ್ಪು ಖಾಸಿಂ ಅಲಿ
Advertisement
Advertisement
ಪರೀಕ್ಷಾ ಕೇಂದ್ರದಲ್ಲಿ ಹಿಜಬ್‍ಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಅಧೀಕ್ಷಕರು ಕೆಬಿ ಭಜಂತ್ರಿ, ಬಿಎಸ್ ಹೊನ್ನಗುಡಿ ಹಾಗೂ ಕೊಠಡಿ ಮೇಲ್ವಿಚಾರಕರಾದ ಎಸ್.ಜಿ. ಗೋಡಕೆ, ಎಸ್.ಎಸ್. ಗುಜಮಾಗಡಿ, ವಿ.ಎನ್. ಕಿವುಡರ್, ಎಸ್.ಯು. ಹೊಕ್ಕಳದ, ಎಸ್.ಎಮ್. ಪತ್ತಾರ ಅವರನ್ನೂ ತಕ್ಷಣ ಅಮಾನತು ಮಾಡಲು ಗದಗ ಡಿಡಿಪಿಐ ಜಿ.ಎಮ್. ಬಸವಲಿಂಗಪ್ಪ ಆದೇಶಿಸಲಾಗಿದೆ. ಇದನ್ನೂ ಓದಿ: ಇಂದು SSLC 2ನೇ ದಿನದ ಪರೀಕ್ಷೆ – ಇವತ್ತೂ ಹಿಜಬ್‍ಧಾರಿ ವಿದ್ಯಾರ್ಥಿನಿಯರು ಗೈರಾಗ್ತಾರಾ..?