– ಇಬ್ಬರು ಅಪ್ರಾಪ್ತರು ಸೇರಿ ಮೂವರ ಬಂಧನ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕಾಮಮೃಗಗಳ ಅಟ್ಟಹಾಸ ಮುಂದುವರೆದಿದೆ. ಫಿಲಂಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ 7ನೇ ತರಗತಿ ವಿದ್ಯಾರ್ಥಿಯೆಂದು ತಿಳಿದುಬಂದಿದೆ. ಮೂವರಲ್ಲಿ ಒಬ್ಬಾತ ಬಾಲಕಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಲ್ಲದೆ ಮೂವರಲ್ಲಿ ಇಬ್ಬರು ಯುವಕರು ಅಪ್ರಾಪ್ತರೆಂದು ತಿಳಿದುಬಂದಿದೆ.
Advertisement
Advertisement
ನಡೆದಿದ್ದೇನು?: ಮೇ 8ರಂದು ಬಾಲಕಿಯನ್ನ ಯಶವಂತಪುರಕ್ಕೆ ಫಿಲಂ ನೋಡಲು ಕರೆದುಕೊಂಡು ಬಂದಿದ್ದ ಆರೋಪಿ ರಾತ್ರಿ 8-30ರ ನಂತರ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಸಿ ಪೀಣ್ಯದ ಪಾಳು ಬಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಸ್ನೇಹಿತರಿಗೆ ಕರೆ ಮಾಡಿದ್ದು, ಅವರು ಸಹ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ರು. ಘಟನೆ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ರು. ರಾತ್ರಿ 10-30ರ ನಂತರ ಎಚ್ಚರಗೊಂಡ ಬಾಲಕಿ ಮನೆ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಸ್ನೇಹಿತೆ ಬಳಿ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ನಂತರ ಬಾಲಕಿ 5 ದಿನಗಳ ಕಾಲ ಸ್ನೇಹಿತೆಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ಅತ್ತ ಬಾಲಕಿಯ ತಾಯಿ ಮಗಳು ನಾಪತ್ತೆಯಾಗಿರೋ ಬಗ್ಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ರು.
Advertisement
5 ದಿನಗಳ ನಂತರ ಮನೆಗೆ ಹೋದ ಬಾಲಕಿ ನಡೆದ ವಿಚಾರವನ್ನೆಲ್ಲಾ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಮಗಳನ್ನು ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.