ಢಾಕಾ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಣ ತ್ರಿಕೋನ ಟ್ವೆಂಟಿ-20 ಸರಣಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಈ ಸಾಧನೆಯನ್ನು ಮಾಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಅಫ್ಘಾನಿಸ್ತಾನ ತಂಡವು 28 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.
Advertisement
ಅಫ್ಘಾನಿಸ್ತಾನ ಇನ್ನಿಂಗ್ಸ್ ನ 17 ಹಾಗೂ 18ನೇ ಓವರ್‍ನಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಒಟ್ಟು ಏಳು ಸಿಕ್ಸರ್ ಸಿಡಿಸಿದ್ದಾರೆ. 16 ಓವರ್ ಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ತೆಂದೈ ಚತಾರಾ ಅವರ 18ನೇ ಓವರ್ ನ ಮೊದಲೆರಡು ಎಸೆತಗಳಲ್ಲಿ ನಬಿ, ಜಾದ್ರನ್ ಜೋಡಿ ಸಿಂಗಲ್ ಕಲೆ ಹಾಕಿತು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ನಬಿ 17ನೇ ಓವರಿನ ಕೊನೆಯ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸಿದರು.
Advertisement
A comfortable 28-run victory for Afghanistan!
A tidy performance from the bowlers but the star of the show was Najibullah Zadran with his unbeaten 69, a knock that featured six sixes. #AFGvZIM SCORECARD ⬇️ https://t.co/cB9DTPraND pic.twitter.com/qwW6d0Yo0k
— ICC (@ICC) September 14, 2019
Advertisement
ಮೊಹಮ್ಮದ್ ನಬಿಗೆ ಕೈಜೋಡಿಸಿದ ಜಾದ್ರನ್ 18ನೇ ಓವರ್‍ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ಆಲ್ ರೌಂಡರ್ ನಬಿ ಹಾಗೂ ಜಾದ್ರನ್ ಜೋಡಿಯ 69 ರನ್‍ಗಳ ಸಹಾಯದಿಂದ ಅಫ್ಘಾನಿಸ್ತಾನ ತಂಡವು ಐದು ವಿಕೆಟ್ ನಷ್ಟಕ್ಕೆ 197 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.
Advertisement
ಆಲ್ ರೌಂಡರ್ ಮೊಹಮ್ಮದ್ ನಬಿ 18 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 38 ರನ್ ಗಳಿಸಿದರೆ, ನಜಿಬುಲ್ಲಾ ಜಾದ್ರನ್ 30 ಎಸೆತಗಳನ್ನು ಎದುರಿಸಿ 5 ಬೌಂಡರಿ, 6 ಸಿಕ್ಸರ್ ಸಹಿತ 69 ರನ್‍ಗಳನ್ನು ಕಲೆಹಾಕಿದರು.
Seven sixes from seven consecutive balls – Najibullah Zadran and Mohammad Nabi smashed the ball to all parts to help Afghanistan defeat Zimbabwe on Saturday. https://t.co/bZUMPsXfxY
— ICC (@ICC) September 14, 2019
ಬೃಹತ್ ಮೊತ್ತವನ್ನು ಪೇರಿಸಲು ಮುಂದಾದ ಜಿಂಬಾಬ್ವೆ ಬ್ಯಾಟ್ಸ್‍ಮನ್‍ಗಳನ್ನು ಅಫ್ಘಾನಿಸ್ತಾನದ ಬೌಲರ್ ಗಳು ಕಟ್ಟಿಹಾಕಿದರು. ಜಿಂಬಾಬ್ವೆ ಟೀಂ ನಾಯಕ ಬಿಆರ್‍ಎಂ ಟೈಲರ್ 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಸೇರಿ 27 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ಬ್ಯಾಟ್ಸ್‍ಮನ್ ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ತಂಡಕ್ಕೆ ನೆರವಾದ ಆರ್.ಡಬ್ಲ್ಯೂ. ಚಕಬ್ವಾ 22 ಎಸೆತಗಳಲ್ಲಿ 42 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಮೂಲಕ ಜಿಂಬಾಬ್ವೆ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ದಾಖಲಿಸಿ ಸೋಲು ಒಪ್ಪಿಕೊಂಡಿತು.
ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ನಜಿಬುಲ್ಲಾ ಜಾದ್ರನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
https://youtu.be/Mk93mhF9xPo