ರಸ್ತೆಯಲ್ಲಿ 7 ಸಿಂಹಗಳ ರಾಜ ನಡಿಗೆ – ಹೌಹಾರಿದ ಜನರು

Public TV
1 Min Read
lion

ಗಾಂಧಿನಗರ: ಕಾಡು ಬಿಟ್ಟು ನಾಡಿಗೆ ಬಂದು, ಇದು ನಮ್ಮ ಏರಿಯಾ ಎನ್ನುವ ಹಾಗೆ ರಸ್ತೆಯಲ್ಲಿ 7 ಸಿಂಹಗಳು ರಾಜಾರೋಷವಾಗಿ ತಿರುಗಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತಿನ ಜುನಾಗಧ್‍ನ ಭಾವ್ನಾಥ್ ರಸ್ತೆಯಲ್ಲಿ ಈ 7 ಸಿಂಹಗಳು ಪ್ರತ್ಯಕ್ಷವಾಗಿತ್ತು. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದ ಹತ್ತಿರವಿರುವ ಕಾರಣಕ್ಕೆ ಸಿಂಹಗಳು ಇಲ್ಲಿ ಕಾಣಿಸಿಕೊಂಡಿತ್ತು. ಶುಕ್ರವಾರ ರಾತ್ರಿ ಮಳೆ ಬರುತ್ತಿದ್ದ ವೇಳೆ ಸಿಂಹಗಳು ಆಹಾರ ಅರಸಿ ಉದ್ಯಾನವನದಿಂದ ನಾಡಿನತ್ತ ಬಂದಿತ್ತು ಎನ್ನಲಾಗಿದೆ. ಹೀಗೆ ಆಹಾರ ಹುಡುಕುತ್ತಾ 7 ಸಿಂಹಗಳು ಇರುವ ಗುಂಪು ಭಾವ್ನಾಥ್ ರಸ್ತೆಗೆ ಬಂದಿದೆ.

lion 2

ಈ ವೇಳೆ ರಸ್ತೆಗಳಲ್ಲಿ ಸಿಂಹಗಳು ರಾಜಗಾಂಭೀರ್ಯದಿಂದ ನಡೆಯುತ್ತ ಸಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ದೃಶ್ಯವನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಹಿಂದೆ ಹೀಗೆ ಸಿಂಹಗಳು ರಸ್ತೆಗೆ ಬಂದ ಘಟನೆಗಳು ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ರೀತಿ ಘಟನೆ ನಡೆದಿದೆ. ಈ ಬಗ್ಗೆ ಉದ್ಯಾನವನ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

2015ರ ಏಷ್ಯಾಟಿಕ್ ಸಿಂಹಗಳ ಗಣತಿ ಪ್ರಕಾರ, ಗುಜರಾತಿನ ಸೌರಾಷ್ಟ್ರದಲ್ಲಿರುವ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ 523 ಸಿಂಹಗಳು ಇದೆ.

Share This Article
Leave a Comment

Leave a Reply

Your email address will not be published. Required fields are marked *