ಬುಡಾಪೆಸ್ಟ್: ಲೆಬನಾನ್‍ನಲ್ಲಿ (Lebanon) ಹಿಜ್ಬೊಲ್ಲಾ ಉಗ್ರರು (Hezbollah) ಸಂವಹನಕ್ಕಾಗಿ ಬಳಸಿದ ಪೇಜರ್‌ಗಳು ಏಕಾಏಕಿ ಸ್ಫೋಟಗೊಂಡ (Lebanon Pager Explosions) ಪರಿಣಾಮ 12 ಮಂದಿ ಮೃತಪಟ್ಟು, ಸಾವಿರಾರು ಮಂದಿ ಗಾಯಗೊಂಡ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ಹಿಂದೆ ಮಹಿಳೆಯೊಬ್ಬಳ ನಂಟಿದೆ ಎಂದು ವರದಿಯಾಗಿದೆ.
ಆಕೆಯ ಹೆಸರು ಕ್ರಿಸ್ಟಿಯಾನಾ ಬರ್ಸೋನಿ- ಆರ್ಸಿಡಿಯಾಕೊನೊ (49), ಆಕೆ ಹಂಗೇರಿ ಮೂಲದ ಬಿಎಸಿ ಕನ್ಸಲ್ಟಿಂಗ್‍ನ ಮಾಲೀಕಳು. ಆಕೆ ಸುಮಾರು 7 ಭಾಷೆಗಳಲ್ಲಿ ಪರಿಣತಳು. ಕಣ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್‍ಡಿ ಪದವೀಧರೆ. ಇಷ್ಟೇ ಅಲ್ಲದೇ ಕಲಾವಿದೆ ಕೂಡ. ಹಂಗೇರಿಯ ಬುಡಾಪೆಸ್ಟ್‌ನ ಅಪಾರ್ಟ್‍ಮೆಂಟ್ ಒಂದರಲ್ಲಿ ಆಕೆ ಚಿತ್ರಿಸಿದ ನಗ್ನಚಿತ್ರಗಳ ರಾಶಿಯೇ ಇದೆ. ಇವುಗಳಲ್ಲದೆ ಆಕೆ ಆಫ್ರಿಕಾ ಮತ್ತು ಯುರೋಪ್‍ನ ಅನೇಕ ಭಾಗಗಳಲ್ಲಿ ನೆರವಿನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಇದನ್ನೂ ಓದಿ: ಪೇಜರ್ ಬ್ಲಾಸ್ಟ್ ಕೇಸ್‌ನಲ್ಲಿ ಟ್ಟಿಸ್ಟ್ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?
Advertisement
ಪೇಜರ್‍ಗಳನ್ನು ವಿನ್ಯಾಸ ಮಾಡಲು ತನ್ನ ಮೂಲ ತೈವಾನ್ ಉತ್ಪಾದಕ ಗೋಲ್ಡ್ ಅಪೊಲೋದಿಂದ ಪರವಾನಗಿ ಹೊಂದಿರುವುದಾಗಿ ಆಕೆಯ ಕಂಪೆನಿ ಲೆಬನಾನ್ ಸ್ಫೋಟದ ಬಳಿಕ ಹೇಳಿಕೆ ನೀಡಿತ್ತು. ಆದರೆ ಈ ಪೇಜರ್‌ಗಳನ್ನು ತಾನು ತಯಾರಿಸಿರುವುದಲ್ಲ ಎಂದು ಕ್ರಿಸ್ಟಿಯಾನಾ ಸ್ಪಷ್ಟನೆ ನೀಡಿದ್ದಾಳೆ. ನಾನು ಇಲ್ಲಿ ಕೇವಲ ಮಧ್ಯವರ್ತಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಳು.
Advertisement
Advertisement
ಪೇಜರ್ ಸ್ಫೋಟದ ಬಳಿಕ ಕ್ರಿಸ್ಟಿಯಾನಾ ಮಿಸ್ಸಿಂಗ್!
ಈ ಘಟನೆ ಬಳಿಕ ಆಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ಆಕೆಯನ್ನು ಅಕ್ಕಪಕ್ಕದ ಮನೆಯವರು ನೋಡಿಲ್ಲ ಎನ್ನುತ್ತಿದ್ದಾರೆ. ಸುದ್ದಿಸಂಸ್ಥೆಗಳು ಮಾಡಿದ ಕರೆಗಳು ಹಾಗೂ ಇ- ಮೇಲ್‍ಗಳಿಗೆ ಕ್ರಿಸ್ಟಿಯಾನಾ ಸ್ಪಂದಿಸಿಲ್ಲ.
Advertisement
ಬಿಎಸಿ ಕನ್ಸಲ್ಟಿಂಗ್ ಒಂದು ಮಧ್ಯವರ್ತಿ ಕಂಪೆನಿಯಾಗಿದ್ದು, ಅದು ದೇಶದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿಲ್ಲ. ಪೇಜರ್‌ಗಳನ್ನು ಹಂಗೇರಿಗೆ ಆಮದು ಮಾಡಿಕೊಳ್ಳಲಾಗಿಲ್ಲ ಎಂದು ಹಂಗೇರಿ ಸರ್ಕಾರ ತಿಳಿಸಿದೆ.
2000ರಲ್ಲಿ ಲಂಡನ್ ಯುನಿವರ್ಸಿಟಿ ಕಾಲೇಜ್‍ನಿಂದ ಪಿಹೆಚ್‍ಡಿ ಪಡೆದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಆಕೆ ಯಾವುದೇ ಸಂಶೋಧನೆ ತೊಡಗಿಸಿಕೊಳ್ಳಲಿಲ್ಲ. ಆಕೆ ತನ್ನ ಉದ್ಯೋಗಕ್ಕೆ ಸಂಬಂಧಿಸಿದ ವೈಯಕ್ತಿಕ ವಿವರಗಳಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿನ ಸತ್ಯಾಸತ್ಯತೆ ಬಗ್ಗೆಯೂ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್- ಹಿಜ್ಬುಲ್ಲಾ ಟಾಪ್ ಕಮಾಂಡರ್ ಹತ್ಯೆ