ತೆಹ್ರಾನ್: ಇರಾನ್‌ನಲ್ಲಿ (Iran) ಸಂಭವಿಸಿದ ಪ್ರಬಲ ಭೂಕಂಪಕ್ಕೆ (Iran Earthquake) ಏಳು ಮಂದಿ ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ 9:44 ಕ್ಕೆ ಇರಾನ್-ಟರ್ಕಿ ಗಡಿಯ ಸಮೀಪವಿರುವ ಖೋಯ್ ನಗರದಲ್ಲಿ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆಯ ಭೂಕಂಪವಾಗಿದೆ ಎನ್ನಲಾಗಿದೆ. ಕಂಪನಗಳು ಸಾಕಷ್ಟು ಪ್ರಬಲವಾಗಿವೆ ಎಂದು ವರದಿಯಾಗಿದೆ. ಇರಾನ್‌ನ ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದ ಹಲವು ಪ್ರದೇಶಗಳಲ್ಲೂ ಭೂಕಂಪದ ಅನುಭವವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿ ಭಯೋತ್ಪಾದಕ ಗುಂಡಿನ ದಾಳಿಗೆ 7 ಮಂದಿ ಬಲಿ, 10 ಮಂದಿಗೆ ಗಾಯ
Advertisement
Advertisement
2022 ರಲ್ಲಿ, ದಕ್ಷಿಣ ಇರಾನ್‌ನಲ್ಲಿ 6.3 ತೀವ್ರತೆಯ ಭೂಕಂಪವಾಗಿತ್ತು. ಈ ವೇಳೆ ಕನಿಷ್ಠ ಐದು ಜನರು ಸಾವನ್ನಪ್ಪಿ, 44 ಮಂದಿ ಗಾಯಗೊಂಡಿದ್ದರು. 2003 ರಲ್ಲಿ, ಇತಿಹಾಸದಲ್ಲೇ ಭೀಕರ ಎಂಬಂತೆ 6.6 ತೀವ್ರತೆಯ ಭೂಕಂಪವು 26,000 ಜನರನ್ನು ಬಲಿ ಪಡೆದಿತ್ತು. 2017 ರಲ್ಲಿ ಪಶ್ಚಿಮ ಇರಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
Advertisement
Advertisement
ಇದರ ನಡುವೆ ಇರಾನ್‌ನ ಕೇಂದ್ರ ನಗರವಾದ ಇಸ್ಫಹಾನ್‌ನಲ್ಲಿರುವ ಮಿಲಿಟರಿ ಸ್ಥಾವರದಲ್ಲೂ ಸಹ ದೊಡ್ಡ ಸ್ಫೋಟ ಸಂಭವಿಸಿದೆ. ಇದು ವಿಫಲ ಡ್ರೋನ್ ದಾಳಿ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಆರ್ಥಿಕ, ಆಹಾರ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕ್‌ಗೆ ಮತ್ತೊಂದು ಸಂಕಷ್ಟ – ನಿಗೂಢ ಕಾಯಿಲೆಗೆ 18 ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k