– ಕೆ.ಪಿ.ನಾಗರಾಜ್
ಮೈಸೂರು: ಮೈಸೂರಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಕಿರಾತಕರನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಈ ಪ್ರಕರಣದ ಸ್ಥಳದಲ್ಲಿ ಸಿಕ್ಕ ಒಂದೇ ಒಂದು ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರು ಆ ಗ್ಯಾಂಗನ್ನು ಬಂಧಿಸಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸ್ ಇನ್ವೆಸ್ಟಿಗೇಷನ್ ಹೇಗಿತ್ತು ಎಂಬ ರೋಚಕ ಕತೆ ನಿಮ್ಮ ಪಬ್ಲಿಕ್ ಟಿವಿಯಲ್ಲಿ ನೋಡಿ.
Advertisement
Advertisement
ಒಂದೇ ಒಂದು ಬಸ್ ಟಿಕೆಟ್!:
ಮೈಸೂರಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಾಗಿತ್ತು. ಮೈಸೂರಿನ ಹೊರವಲಯದ ಲಲಿತಾದ್ರಿಪುರ ಬಡಾವಣೆ ನಿರ್ಜನ ಪ್ರದೇಶದಲ್ಲಿ ಆಗಸ್ಟ್ 24 ರಂದು ಸಂಜೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಗ್ಯಾಂಗ್‍ರೇಪ್ ಪ್ರಕರಣದ ಸಂಬಂಧ ಆರೋಪಿಗಳನ್ನ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯಾದ್ಯಂತ ಜನಾಕ್ರೋಶ ಕೂಡ ವ್ಯಕ್ತವಾಗಿತ್ತು. ಮೈಸೂರು ಪೊಲೀಸರು ಕೊನೆಗೂ ಗ್ಯಾಂಗ್ ರೇಪ್ ಪ್ರಕರಣವನ್ನೂ ಭೇದಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಹೇಳಿಕೆ ಸಿಗದೆ ತನಿಖೆ ನಡೆಸಲು ಮುಂದಾದ ಪೊಲೀಸರಿಗೆ ಆರಂಭದಲ್ಲಿ ಈ ಪ್ರಕರಣ ಸವಾಲಾಗಿತ್ತು. ಸ್ಥಳ ಪರಿಶೀಲನೆ ಮಾಡಲು ಹೊರಟ ಪೊಲೀಸರಿಗೆ ಆರೋಪಿಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಒಂದೇ ಒಂದು ಬಸ್ ಟಿಕೆಟ್ ಸುಳಿವು ನೀಡಿತ್ತು. ಬಸ್ ಟಿಕೆಟ್ ಹಿಡಿದು ಹೊರಟ ಪೊಲೀಸರು ಗ್ಯಾಂಗ್ ರೇಪ್ ಪ್ರಕರಣದ ಕಿರಾತಕರನ್ನು ಪಕ್ಕದ ತಮಿಳುನಾಡಿನಿಂದ ಎಳೆದು ತಂದಿದ್ದಾರೆ.
Advertisement
Advertisement
ಆಗಸ್ಟ್ 24ರಂದು ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತ ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಪ್ರಕರಣದ ಐವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!
ಆ ತಂಡಕ್ಕಿತ್ತು ಕ್ರಿಮಿನಲ್ ಬ್ಯಾಕ್ ಗ್ರೌಂಡ್!:
ಇನ್ನು ಪೊಲೀಸರು ಬಂಧಿಸಿದ ಐವರು ಆರೋಪಿಗಳು ತಮಿಳುನಾಡಿನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರು. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ರೂವಾರಿಗಳೇ ಇವರು ಅನ್ನೋದು ಕನ್ಫರ್ಮ್ ಆಗಿದೆ. ಬಂಧಿತ ಆರೋಪಿಗಳು 24 ರಂದು ಮಧ್ಯಾಹ್ನ ತಮಿಳುನಾಡಿನ ತಾಳವಾಡಿಯಿಂದ ಚಾಮರಾಜನಗರಕ್ಕೆ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಬಂದಿದ್ದರು. ಘಟನೆ ನಡೆದ ದಿನವೇ ಮೊದಲ ದಿನವೇ ಸಿಕ್ಕಿದ್ದ ಬಸ್ ಟಿಕೆಟ್ ವಶಕ್ಕೆ ಪಡೆದಿದ್ದ ಪೊಲೀಸರು, ಬಸ್ ಟಿಕೆಟ್ ಆಧಾರದಲ್ಲಿ ಸರಿಸುಮಾರು 5 ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್ ಲೊಕೇಷನ್ ಗಳನ್ನು ಟ್ರೇಸ್ ಮಾಡಿದ್ದರು. ಒಂದು ಘಟನೆ ನಡೆದ ಸ್ಥಳ, ತಾಳವಾಡಿಯಿಂದ ಚಾಮರಾಜನಗರಕ್ಕೆ ಬಂದ ಬಸ್ ಟಿಕೆಟ್, ಮೊಬೈಲ್ ಟವರ್ ಲೊಕೇಷನ್ ಹಾಗೂ ಘಟನೆ ನಡೆದ ಸ್ಥಳದ ಟವರ್ ಲೊಕೇಷನ್ ನಲ್ಲಿ ಒಂದು ಮೊಬೈಲ್ ನಂಬರ್ ಆಕ್ಟಿವ್ ಆಗಿದ್ದು ಗೊತ್ತಾಗಿತ್ತು. ಎರಡೂ ಕಡೆಗಳಲ್ಲಿ ಸಿಕ್ಕಿದ್ದು ಒಂದೇ ನಂಬರ್. ಆ ಒಂದೇ ನಂಬರ್ ಜಾಡು ಹಿಡಿದ ಪೊಲೀಸರು ಟೆಕ್ನಿಕಲ್ ಹಾಗೂ ಸೈಂಟಿಫಿಕ್ ಸಾಕ್ಷ್ಯಗಳ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ
ಆಗಾಗ ಮೈಸೂರಿಗೆ ಬರ್ತಿದ್ದರು!:
ಬಂಧಿತ ಆರೋಪಿಗಳು ಕೂಲಿ ಕಾರ್ಮಿಕರು. ಎಲ್ಲರೂ ತಮಿಳುನಾಡಿನ ತಿರುಪೂರಿನವರಾಗಿದ್ರೆ, ಓರ್ವ ಮಾತ್ರ ತಾಳವಾಡಿ ಸಮಿಪದ ಸೂಸೈಪುರಂ ಅನ್ನೋದು ಗೊತ್ತಾಗಿದೆ. ಬಂಧಿತರು ಮೈಸೂರಿಗೆ ಆಗಾಗ ಬಂದು ಹೋಗ್ತಾ ಇದ್ರು. ಮೈಸೂರಿನ ಬಂಡಿಪಾಳ್ಯ ಎಪಿಎಂಸಿಗೆ ತರಕಾರಿ ಕೊಳ್ಳಲು ಬರುವ ಓರ್ವ ಆರೋಪಿ ಡ್ರೈವರ್ ಜೊತೆ ಇನ್ನುಳಿದ ಐವರು ಬರ್ತಾ ಇದ್ರು. ಬಂದು ಹೋಗುವ ವೇಳೆ ಎಲ್ಲರೂ ಮದ್ಯಪಾನ ಮಾಡಿಯೇ ತೆರಳುತ್ತಿದ್ರು. ಇವರೆಲ್ಲರೂ ಹೆದ್ದಾರಿಯ ರಾಬರಿ ಹಂತಕರು ಅನ್ನೋದು ಕೂಡ ಸಾಕಷ್ಟು ಅನುಮಾನ ಪೊಲೀಸರಿಗಿದೆ. ಹೀಗೆ 24ರಂದು ಬಂದ ಆರು ಮಂದಿ ಲಲಿತಾದ್ರಿಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಬಂದಿದ್ರು. ಇದೇ ವೇಳೆ ಸ್ಥಳಕ್ಕೆ ಬಂದ ಕಾಲೇಜು ವಿದ್ಯಾರ್ಥಿನಿ ಹಾಗೂ ಸ್ನೇಹಿತ ಏಕಾಂತದಲ್ಲಿ ಇರೋದನ್ನ ನೋಡಿಯೇ ಅಟ್ಯಾಕ್ ಮಾಡಿದ್ದಾರೆ. ಯುವತಿ ಸ್ನೇಹಿತನಿಗೆ ಥಳಿಸಿ ಪೊದೆಯೊಳಗೆ ಸಂತ್ರಸ್ತೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯುವಕ ಹಾಗೂ ಸಂತ್ರಸ್ತೆಯಿಂದ 3 ಲಕ್ಷ ರೂಪಾಯಿಗಳನ್ನು ಡಿಮ್ಯಾಂಡ್ ಮಾಡಿದ್ರು. ಈ ವೇಳೆ ಈ ಯತ್ನ ವಿಫಲವಾಗಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಬಂಧಿತರೆಲ್ಲರೂ ಡ್ರೈವರ್, ಕಾರ್ಪೆಂಟರ್, ವೈರಿಂಗ್ ಕೆಲಸ ಮಾಡುವವರಾಗಿದ್ರು. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಕೂಡ ಇದ್ದು ಆತನ ಮಾಹಿತಿ ಸಹ ಶೀಘ್ರದಲ್ಲೇ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳೆಲ್ಲರೂ ಕೂಲಿಕಾರ್ಮಿಕರು!
ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!https://t.co/mNmgo03d9G#MysuruSuperCops #MysuruCase #MysuruStudents #Student #KannadaNews #Police
— PublicTV (@publictvnews) August 28, 2021
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ ಪೊಲೀಸರಿಗೆ ಅಭಿನಂದನೆ ಜೊತೆಗೆ ಐದು ಲಕ್ಷದ ಕ್ಯಾಶ್ ರಿವಾರ್ಡ್ ಕೂಡ ಬಂದಿದೆ. ಪ್ರಕರಣ ನಡೆದ 82 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಮೈಸೂರು ಪೊಲೀಸರಿಗೆ ಸಾರ್ವಜನಿಕರು ಭೇಷ್ ಎನ್ನುತ್ತಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ