ಬೆಂಗಳೂರು: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ (CMS) ವಿರುದ್ಧ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಆರ್‌ಬಿಐಗೆ (RBI) ಪತ್ರ ಬರೆದಿದೆ.
ಹಾಡಹಗಲೇ ನಡೆದಿದ್ದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ (HDFC Bank) ಹಣ ದರೋಡೆ ಪ್ರಕರಣದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಇಲಾಖೆ ಆರ್‌ಬಿಐಗೆ ಪತ್ರ ಬರೆದಿದ್ದು, ದರೋಡೆ ಪ್ರಕರಣದಲ್ಲಿ ಸಿಎಂಎಸ್ ಭದ್ರತಾ ಲೋಪ ಕಂಡುಬಂದಿದ್ದು, ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.ಇದನ್ನೂ ಓದಿ: Tumakuru | ಒಂದೇ ದಿನ ಎರಡು ಪ್ರತಿಷ್ಠಿತ ದೇವಳದ ಹುಂಡಿಗೆ ಕನ್ನ
ಈ ನಡುವೆ RBI ಮೂಲಕ ಎಟಿಎಂಗೆ ಹಣ ತುಂಬುವ ಎಲ್ಲಾ ಸಂಸ್ಥೆಗಳ ಜೊತೆಗೆ ಪೊಲೀಸ್ ಇಲಾಖೆ ಸಭೆ ನಡೆಸಲು ಕೂಡ ತಯಾರಿ ನಡೆಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳ ಲಿಸ್ಟ್ ತಯಾರಿ ಮಾಡಲಾಗಿದೆ. ರಿಜಿಸ್ಟರ್ ಆಫ್ ಸೊಸೈಟಿಗೆ ಈಗಾಗಲೇ ಕಮಿಷನರೇಟ್ ವ್ಯಾಪ್ತಿಯ ಸಂಸ್ಥೆಗಳ ಲಿಸ್ಟ್ ಕೊಡಲು ಸೂಚನೆ ನೀಡಲಾಗಿದೆ.
ಇನ್ನೂ ನಗರದ ಆಯಾ ವಿಭಾಗದ ಡಿಸಿಪಿಗಳಿಗೆ ತಮ್ಮ ವ್ಯಾಪ್ತಿಯ ಲಿಸ್ಟ್ ತಯಾರಿಗೆ ಸೂಚನೆ ನೀಡಿದ್ದು, ರಿಜಿಸ್ಟರ್ ಆಫ್ ಸೊಸೈಟಿಯಿಂದ ಮಾಹಿತಿ ಪಡೆದು, RBI ಮೂಲಕವೇ ವಾರ್ನಿಂಗ್ ಕೊಡಿಸಲು ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗ್ಲೇ ಆರ್‌ಬಿಐ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಕಮಿಷನರ್, ಬಹುತೇಕ ಈ ವಾರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.
ಸಿಬ್ಬಂದಿ ನೇಮಕದಲ್ಲಿ ಎನ್‌ಒಸಿ ಪಡೆಯದಿರೋದು, ದಾಖಲೆ ಪಡೆಯದೇ ಕೆಲಸಕ್ಕೆ ಸಿಬ್ಬಂದಿ ನೇಮಕ, ಸಾಲು ಸಾಲು ಭದ್ರತಾ ಲೋಪವೆಸಗಿ ಕೆಲಸಂಸ್ಥೆಗಳ ನಿರ್ಲಕ್ಷ್ಯಕ್ಕೆ ಆರ್‌ಬಿಐ ಮೂಲಕವೇ ಪೊಲೀಸರು ಮಾರ್ಗಸೂಚಿ ಪ್ರಕಟಿಸಲು ನಿರ್ಧರಿಸಿದ್ದಾರೆ.ಇದನ್ನೂ ಓದಿ: ಡಿಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ‘ದಿ ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!

