67ರ ಅಜ್ಜನ ಮೇಲೆ 19ರ ಹುಡುಗಿಗೆ ಲವ್- ಕುಟುಂಬಸ್ಥರಿಂದ ರಕ್ಷಣೆ ಕೋರಿ ಕೋರ್ಟ್ ಮೊರೆ

Public TV
2 Min Read
LOVE MARRIAGE

– ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ 2ನೇ ಮದುವೆ
– ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಪೊಲೀಸರು

ಚಂಡೀಗಢ: ಪ್ರೀತಿ ಮಾಯೆ, ಪ್ರೀತಿಗೆ ಕಣ್ಣು ಇಲ್ಲ ಎಂದು ಹಲವರು ಹೇಳುತ್ತಾರೆ ಇದೆಲ್ಲ ಬಾಯಿ ಮಾತಿಗೆ ಅಲ್ಲ. ಪ್ರೀತಿಗೆ ನಿಜಕ್ಕೂ ಕಣ್ಣು ಇಲ್ಲ, ವಯಸ್ಸಿನ ಅಂತರವಿಲ್ಲ ಎಂಬುದು ಪಂಜಾಬ್-ಹರ್ಯಾಣ ಗಡಿ ಭಾಗ ಹಂಚ್‍ಪುರಿಯ ಹಠ್ನಿಯಲ್ಲಿ ಜೋಡಿಯೊಂದು ಸಾಭೀತು ಮಾಡಿದೆ.

19 ವರ್ಷದ ಯುವತಿಗೆ 67 ವರ್ಷದ ಮುದುಕನ ಮೇಲೆ ಪ್ರೀತಿಯಾಗಿರುವುದ ಎಲ್ಲಡೆ ಸುದ್ದಿಯಾಗುತ್ತಿದೆ. ಮನೆಗೆ ಬರುತ್ತಿದ್ದ ಮುದುಕನನ್ನು ಪರಿಚಯ ಮಾಡಿಕೊಂಡ ಯುವತಿ ಅಜ್ಜನ ಪ್ರೀತಿಯ ಬಲೆಯಲ್ಲಿ ಬಿದ್ದು ಆತನನ್ನು ಮದುವೆಯಾಗಿದ್ದಾಳೆ. ಇದನ್ನೂ ಓದಿ:  ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡು ಹೊತ್ತಿ ಉರಿಯಿತು

Love

ಆಕೆಗೆ ಅದಾಗಲೇ ಮದುವೆಯಾಗಿತ್ತು. ಇದೀಗ 19 ವರ್ಷ ತುಂಬಿ 20ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅತ್ತ 67 ವರ್ಷದ ಅಜ್ಜ ಏಳು ಮಕ್ಕಳ ತಂದೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಅದು ಕೂಡ ಭೂ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಂಬುದು ಇನ್ನೂ ರೋಚಕ. ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಹುಡುಗಿಯ ಕುಟುಂಬವು ವಿವಾದ ಹೊಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುದುಕ ಯುವತಿಯ ಕುಟುಂಬಕ್ಕೆ ಸಹಾಯ ಮಾಡಲು ಬರುತ್ತಿದ್ದರು. ಈ ಸಮಯದಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಅತ್ತ ನಾಲ್ಕು ವರ್ಷಗಳ ಹಿಂದೆ ಮುದುಕನ ಪತ್ನಿ ಕೂಡ ಮೃತಪಟ್ಟಿದ್ದರು. ಹೀಗಾಗಿ ಮತ್ತೊಂದು ಮದುವೆಯಾಗುವ ಬಗ್ಗೆ ಯೋಚಿಸಿದ್ದನು.

LOVE

ಇದೇ ಸಮಯದಲ್ಲಿ ಅಜ್ಜನ ಪ್ರೇಮಪಾಶದಲ್ಲಿ ಮುಳುಗಿದ್ದ ಯುವತಿ ಕೂಡ ಗಂಡನಿಗೆ ಕೈ ಕೊಡಲು ರೆಡಿಯಾಗಿದ್ದಳು. ಅದರಂತೆ ಪತಿಯನ್ನು ಬಿಟ್ಟು ಓಡಿ ಹೋಗಿ ಯುವತಿ ಮುದುಕನನ್ನು ಮದುವೆಯಾಗಿದ್ದಾಳೆ. ಇದರ ಬೆನ್ನಲ್ಲೇ ಎರಡು ಕುಟುಂಬದಿಂದ ಬೆದರಿಕೆಗಳು ಬರಲಾರಂಭಿಸಿದೆ. ಅಷ್ಟೇ ಅಲ್ಲದೆ ಯುವತಿ ಕುಟುಂಬಸ್ಥರು ಅಜ್ಜನ ಮೇಲೆ ಕೇಸ್ ದಾಖಲಿಸಿದ್ದಾರೆ.

ಇದರಿಂದ ಬೇರೆ ದಾರಿ ಕಾಣದೇ ಯುವತಿ ಹಾಗೂ ಮುದುಕ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಪತ್ನಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆ ಎಂದು ಪಂಜಾಬ್-ಹರ್ಯಾಣ ಕೋರ್ಟ್‍ಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗಮನಿಸಿದ ಜಡ್ಜ್ ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತಷ್ಟು ತನಿಖೆ ನಡೆಸುವಂತೆ ನ್ಯಾಯಮೂರ್ತಿ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

court

ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಪ್ರೀತಿಸಿ ಮದುವೆಯಾಗಿರುವುದು ತಿಳಿದು ಬಂದಿದೆ. ಆದರೆ ಇದೀಗ ಮನವೊಲಿಸಲು ಯತ್ನಿಸಲಾದರೂ ಮುದಕನನ್ನು ಬಿಟ್ಟಿರಲು ಯುವತಿ ಒಪ್ಪುತ್ತಿಲ್ಲ. ಅತ್ತ ಯುವತಿಯನ್ನು ಬಿಟ್ಟಿರಲು ಮುದುಕ ಕೂಡ ರೆಡಿಯಿಲ್ಲ. ಹೀಗಾಗಿ ಪೊಲೀಸರು ಕೂಡ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದು, ಈ ಪ್ರಕರಣವನ್ನು ಇತ್ಯರ್ಥ ಪಡಿಸುವುದು ಹೇಗೆ ಎಂದು ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಕಾಲ ಕಳೆಯಬೇಕಿದ್ದ ಮುದುಕ 19ರ ಹರೆಯದ ಹುಡುಗಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *