ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಹಾಗೂ ಶೀತದ ಸಿರಪ್ಗಳ (Cough Syrup) ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಎಚ್ಚರಿಕೆ ನೀಡಿದೆ. ಈ ಸಿರಪ್ಗಳು ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ (Gambia) 66 ಮಕ್ಕಳ ಸಾವಿಗೆ ಸಂಬಂಧಪಟ್ಟಿವೆ ಎಂದು ತಿಳಿಸಿದೆ.
ಈ ಸಿರಪ್ಗಳ ಮಾದರಿಗಳನ್ನು ಸಂಗ್ರಹಿಸಿ ಈಗಾಗಲೇ ಪ್ರಯೋಗಾಲಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಅವುಗಳ ವಿಶ್ಲೇಷಣೆಯಲ್ಲಿ ಹಾನಿಕಾರಕ ಅಂಶಗಳು ಒಳಗೊಂಡಿರುವುದು ಕಂಡುಬಂದಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ದಸರಾ ರಜೆ ಮುಗಿಸಿ ಬೆಂಗಳೂರಿನತ್ತ ಜನ – ಬಸ್ ತುಂಬಿ ಟಾಪ್ ಮೇಲೂ ಪ್ರಯಾಣ
Advertisement
“WHO has today issued a medical product alert for four contaminated medicines identified in #Gambia that have been potentially linked with acute kidney injuries and 66 deaths among children. The loss of these young lives is beyond heartbreaking for their families”-@DrTedros
— World Health Organization (WHO) (@WHO) October 5, 2022
Advertisement
4 ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಅವು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಡೈಥಿಲೀನ್ ಗ್ಲೈಕೋಲ್ ಹಾಗೂ ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ ಎಂದು ಡಬ್ಲ್ಯುಹೆಚ್ಒ ಎಚ್ಚರಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ
Advertisement
ಸದ್ಯ ಈ ಉತ್ಪನ್ನಗಳನ್ನು ಬಳಸಿರುವುದರ ಅಡ್ಡ ಪರಿಣಾಮ ಗ್ಯಾಂಬಿಯಾದಲ್ಲಿ ಮಾತ್ರವೇ ಇಲ್ಲಿಯವರೆಗೆ ಕಂಡುಬಂದಿದೆ. ಈ ಉತ್ಪನ್ನಗಳನ್ನು ಇತರ ದೇಶಗಳಿಗೂ ವಿತರಿಸಲಾಗಿದೆ ಎಂಬುದು ತಿಳಿದುಬಂದಿದೆ.