ಮುಂಬೈ: ಬಾಲಿವುಡ್‍ನ ಮುದ್ದಾದ ಜೋಡಿಗಳಲ್ಲಿ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ ಕೂಡ ಒಂದು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಹಾಸ್ಯದ ವೀಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ದಿನಗಳು ಹಿಂದೆ ಸಮಾರಂಭವೊಂದಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಿತೇಶ್, ನಟಿಯೊಬ್ಬರ ಜೊತೆ ಜೆನಿಲಿಯಾ ಮುಂದೆಯೇ ಅತೀ ಸಲುಗೆಯಿಂದ ನಡೆದುಕೊಂಡಿದ್ದರು. ಇದನ್ನು ಕಂಡು ಜೆನಿಲಿಯಾ ರಿತೇಶ್ ಮೇಲೆ ಆಕ್ರೋಶಗೊಂಡಿದ್ದರು. ಇದೀಗ ಈ ವೀಡಿಯೋವನ್ನು ಜೆನಿಲಿಯಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಮುಂದೇನಾಯ್ತು ಎಂದು ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿದ್ದಾರೆ.
Advertisement
ವೀಡಿಯೋದಲ್ಲಿ ರಿತೇಶ್ ದೇಶ್‍ಮುಖ್ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಜೆನಿಲಿಯಾ ಸಮಾಧಾನದಿಂದ ಕೇಳುತ್ತಿರುತ್ತಾರೆ. ನಂತರ ರಿತೇಶ್ ಪ್ರೀತಿ ಜಿಂಟಾರನ್ನು ತಬ್ಬಿಕೊಂಡು, ಕೈಗೆ ಕಿಸ್ ಮಾಡುತ್ತಾರೆ. ಇದನ್ನು ನೋಡಿ ಜೆನಿಲಿಯಾ ಗರಂ ಆಗುತ್ತಾರೆ. ಬಳಿಕ ಮನೆಗೆ ಬಂದ ಮೇಲೆ ರಿತೇಶ್‍ರನ್ನು ಜೆನಿಲಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಿತೇಶ್ ಸಾಕಪ್ಪಾ ಸಾಕು ಎಂದು ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ. ಈ ಘಟನೆಯು 2019ರ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ವೀಡಿಯೋದಲ್ಲಿ ಜೆನಿಲಿಯಾ ಮುಖಭಾವನೆ ಎಲ್ಲರ ಗಮನ ಸೆಳೆದಿದೆ.
Advertisement
Advertisement
ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೇರಿ ಕಸಮ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 2012ರ ಫೆಬ್ರವರಿ 3ರಂದು ಹಿಂದೂ ಸಂಪ್ರಾದಾಯ ಪ್ರಕಾರ ಸಪ್ತಪದಿ ತುಳಿದರು.
Advertisement
View this post on Instagram