ಬೆಂಗಳೂರು: ವ್ಯಕ್ತಿಯೊಬ್ಬರು ಟ್ರಾಫಿಕ್ ನಿಯಮ (Traffic Rule) ಪಾಲಿಸದೆ ಬರೋಬ್ಬರಿ 643 ಬಾರಿ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆ ದಾಖಲೆಯ ಫೈನ್ (Fine) ಬಿದ್ದಿದೆ. ಬರೋಬ್ಬರಿ 3.22 ಲಕ್ಷ ರೂ. ಫೈನ್ ಬಿದ್ದಿರೋ ಸ್ಕೂಟಿ (Scooty) ಮೇಲೆ ಇದೀಗ ಟ್ರಾಫಿಕ್ ಪೊಲೀಸರು ಕ್ಯಾಮೆರಾ ಕಣ್ಣಿಟ್ಟಿದ್ದಾರೆ.
ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಗಂಗಾನಗರ, ಆರ್‌ಟಿ ನಗರ ಭಾಗದಲ್ಲಿ ಓಡಾಡಿದೆ. ಈ ಸ್ಕೂಟಿಯಲ್ಲಿ ಪ್ರಯಾಣಿಸಿದವರು ಹೆಲ್ಮೆಟ್ ಧರಿಸದೆ, ಸಿಗ್ನಲ್ ಜಂಪ್ ಸೇರಿದಂತೆ ಬರೋಬ್ಬರಿ 643 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: ಹೆಚ್ಚಾಗ್ತಿದೆ ಕೋವಿಡ್ ಉಪತಳಿ JN.1 ಭೀತಿ – ಕ್ರಿಸ್‌ಮಸ್, ಹೊಸವರ್ಷ ಸಂಭ್ರಮಕ್ಕೆ ಬೀಳುತ್ತಾ ಬ್ರೇಕ್?
Advertisement
Advertisement
ಈ ಸ್ಕೂಟಿ ಬೆಲೆ 20-30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಬಿದ್ದಿರುವ ದಂಡ ಬರೋಬ್ಬರಿ 3.22 ಲಕ್ಷ ರೂ. ಇದೀಗ ಪೊಲೀಸರ ಕಣ್ತಪ್ಪಿಸಿ ಓಡಾಡಬಹುದು ಎನ್ನುವವರಿಗೆ ಕ್ಯಾಮೆರಾ ಶಾಕ್ ನೀಡಿದೆ. ಇದೀಗ ದಾಖಲೆಯ ನಿಯಮ ಉಲ್ಲಂಘಿಸಿದ ವೆಹಿಕಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್