ಬೆಂಗಳೂರು: ಮದುವೆ ಆಗೋದಾಗಿ ನಂಬಿಸಿ 72 ವರ್ಷದ ವೃದ್ಧ (Old Man) ಮೋಸ (Cheat) ಮಾಡಿದ್ದಾನೆ ಎಂದು 63 ವರ್ಷದ ವೃದ್ಧೆ (Old Woman) ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ದಯಾಮಣಿ (63) ಎಂಬ ವೃದ್ಧೆ ಲೋಕನಾಥ್ (72) ಎಂಬ ವೃದ್ಧನ ವಿರುದ್ಧ ಬೆಂಗಳೂರಿನ ಪೂರ್ವ ವಿಭಾಗ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಹಲಸೂರು ನಿವಾಸಿಯಾದ ದಯಾಮಣಿಗೆ ಮದುವೆ ಆಗಿ ಗಂಡ ಮರಣ ಹೊಂದಿದ್ದರು. ಲೋಕನಾಥ್ ಪತ್ನಿ ಕೂಡ ಮರಣ ಹೊಂದಿದ್ದು, ಮಗನಿಗೆ ಮದುವೆ ಮಾಡಿಸುವ ಸಲುವಾಗಿ ಹೆಣ್ಣು ನೋಡುತ್ತಿದ್ದರು. ಈ ವೇಳೆ ದಯಾಮಣಿ ಹೆಣ್ಣು ತೋರಿಸುವುದಾಗಿ ಲೋಕನಾಥ್‌ಗೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ (Love) ತಿರುಗಿ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದರು. ಇದನ್ನೂ ಓದಿ: ಸಾವಿನಲ್ಲೂ ಒಂದಾದ ಸ್ನೇಹಿತರು
Advertisement
Advertisement
ಇದೇ ಖುಷಿಯಲ್ಲಿ ಇಬ್ಬರೂ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಟ್ರಿಪ್ ಕೂಡ ಹೋಗಿದ್ದರು. ಆದರೆ ಇತ್ತೀಚಿಗೆ ಲೋಕನಾಥ್, ದಯಾಮಣಿಯನ್ನು ದೂರ ಮಾಡಲು ಶುರು ಮಾಡಿದ್ದರು. ಇದರಿಂದ ನೊಂದ ದಯಾಮಣಿ ಲೋಕನಾಥ್‌ಗೆ ಫೋನ್ ಮಾಡಿ ಕೇಳಿದ ವೇಳೆ ಮದುವೆ ಆಗೋಕೆ ಆಗಲ್ಲ. ಅದೇನ್ ಮಾಡ್ಕೋತಿಯಾ ಮಾಡ್ಕೋ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಇದರಿಂದ ಬೇಸತ್ತ ದಯಾಮಣಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆ ದಂಪತಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್- ಪತ್ನಿ, ಮಗುವಿಗೆ ಗುಂಡು ಹಾರಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ
Advertisement
Web Stories