ಭುವನೇಶ್ವರ: ನೆರೆ ಮನೆಯವರ ಮದುವೆ ಕಾರ್ಯಕ್ರಮದ ಪ್ರಯುಕ್ತ ಡಿಜೆ ಮ್ಯೂಸಿಕ್ ನುಡಿಸಿದ್ದ ಪರಿಣಾಮ ಕೋಳಿ ಫಾರಂ ಒಂದರಲ್ಲಿ 63 ಕೋಳಿಗಳು ಬಲಿಯಾದ ವಿಚಿತ್ರ ಘಟನೆ ಒಡಿಶಾದ ಬಾಲಸೋರ್ ಎಂಬಲ್ಲಿ ನಡೆದಿದೆ. ನೆರೆಮನೆಯವರು ಮದುವೆ ಮನೆಯ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
Advertisement
ಕರದಂಗಡಿ ಗ್ರಾಮ ನಿವಾಸಿ ಕೋಳಿ ಫಾರಂ ಮಾಲಿಕ ರಂಜಿತ್ ಪರಿದಾ ಎಂಬುವವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ನೆರೆಮನೆಯ ರಾಮಚಂದ್ರ ಪರಿದಾ ಅವರ ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಮ್ಯೂಸಿಕ್ ಬಾರಿಸುತ್ತಿದ್ದರಿಂದ ಕೋಳಿಗಳು ಹೃದಯಾಘಾತಗೊಂಡು ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು
Advertisement
Advertisement
ರಂಜಿತ್ ಪ್ರಕಾರ ಭಾನುವಾರ ರಾತ್ರಿ 11:30ರ ಸುಮಾರಿಗೆ ಡಿಜೆ ಬ್ಯಾಂಡ್ ಅವರ ಜಮೀನಿನ ಮುಂದೆ ಸಾಗಿದೆ. ಡಿಜೆ ಅವರ ಫಾರ್ಮ್ ಸಮೀಪಿಸುತ್ತಿದ್ದಂತೆ ಕೋಳಿಗಳು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದವು. ವಾಲ್ಯೂಮ್ ಕಡಿಮೆ ಮಾಡುವಂತೆ ಡಿಜೆಗೆ ರಂಜಿತ್ ವಿನಂತಿಸಿದರು. ಆದರೂ ಅವರು ಕೇಳದೆ ಹೋದಾಗ ತಮ್ಮ 63 ಕೋಳಿಗಳು ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ.
Advertisement
ಕೋಳಿಗಳು ಕುಸಿದುಬಿದ್ದಾಗ ಅವುಗಳನ್ನು ಬದುಕಿಸಲು ಕೋಳಿ ಫಾರಂ ಮಾಲಿಕರು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ನಂತರ ಅವರು ಸ್ಥಳೀಯ ಪಶುವೈದ್ಯರನ್ನು ಸಂಪರ್ಕಿಸಿದಾಗ ಅವುಗಳು ಅತಿಯಾದ ಶಬ್ದದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿವೆ ಎಂದಿದ್ದಾರೆ.
ರಂಜಿತ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಉದ್ಯೋಗ ಸಿಗದಿದ್ದಾಗ 2019ರಲ್ಲಿ 2 ಲಕ್ಷ ರೂ. ಸಾಲ ಪಡೆದು ಬ್ರೈಲರ್ ಫಾರ್ಮ್ ಆರಂಭಿಸಿದ್ದರು. ಮೊದಲಿಗೆ ನೆರೆಮನೆಯ ರಾಮಚಂದ್ರನ ಬಳಿ ಪರಿಹಾರ ಕೇಳಲು ಹೋಗಿದ್ದಾಗ ಅವರು ನಿರಾಕರಿಸಿದ್ದರು. ಬೇರೆ ದಾರಿ ತೋಚದಿದ್ದಾಗ ರಂಜಿತ್ ರಾಮಚಂದ್ರನ ವಿರುದ್ಧ ನೀಲಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ
ಈ ಆರೋಪವನ್ನು ಪರಿಶೀಲಿಸಿ ಎರಡೂ ಕಡೆಯವರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುವುದು ಎಂದು ಬಾಲಸೋರ್ ಪೊಲೀಸ್ ಎಸ್ಪಿ ಸುಧಾಂಶು ಮಿಶ್ರಾ ಹೇಳಿದ್ದಾರೆ. ಆದರೆ ರಾಮಚಂದ್ರ ಈ ಆರೋಪವನ್ನು ವ್ಯಂಗ್ಯ ಮಾಡಿದ್ದಾರೆ. ಲಕ್ಷಗಟ್ಟಲೆ ಕೋಳಿಗಳನ್ನು ಅತಿಯಾದ ಶಬ್ದದ ಹಾರ್ನ್‍ಗಳಿರುವ ರಸ್ತೆಯಲ್ಲಿ ಸಾಗಿಸಲಾಗುತ್ತದೆ. ಆಗ ಸಾಯದೇ ಇರುವ ಕೋಳಿಗಳು ಡಿಜೆ ಮ್ಯೂಸಿಕ್‍ನಿಂದ ಸಾಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅವರು ನನ್ನ ಬಳಿ ಬಂದು ಮನವಿ ಮಾಡಿದಾಗ ಡಿಜೆ ಧ್ವನಿಯನ್ನು ಕಡಿಮೆ ಮಾಡಿದ್ದೆ ಎಂದಿದ್ದಾರೆ.