ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು ಬುಕ್ ಮಾಡಿದೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಈ ವ್ಯವಸ್ಥೆ ಮಾಡಿದ್ದಾರೆ. 18 ಫೈವ್ ಸ್ಟಾರ್, 23 ತ್ರಿಸ್ಟಾರ್, 18 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 6,008 ರೂಂ ಗಳನ್ನು ಬುಕ್ ಮಾಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರೇ ತುಂಬಬೇಕಾಗುತ್ತದೆ.
Advertisement
Advertisement
ಮೊದಲು ಬಂದವರು ತಮ್ಮ ಆಯ್ಕೆ ಅನ್ವಯ ಹೋಟೆಲಿಗೆ ಕರೆದುಕೊಂಡು ಹೋಗಲಾಗುತ್ತದೆ. ಒಂದು ಹೋಟೆಲ್ ಭರ್ತಿಯಾದ ಬಳಿಕ ಮತ್ತೊಂದು ಹೋಟೆಲ್ ಬಳಕೆ ಮಾಡಲಾಗುತ್ತದೆ. ಊಟ ತಿಂಡಿ ಎಲ್ಲಾ ಸೇರಿ ಒಂದು ದಿನಕ್ಕೆ ಸರ್ಕಾರವೇ ದರವನ್ನು ನಿಗದಿ ಪಡಿಸಿದೆ. ಒಟ್ಟು 14 ದಿನಗಳ ಕಾಲ ಕನ್ನಡಿಗರು ಈ ಹೋಟೆಲಿನಲ್ಲಿ ಕ್ವಾರಂಟೈನ್ ಆಗಲಿದ್ದು, ಡಬಲ್ ಬೆಡ್ ದರ ಹೆಚ್ಚಾಗಲಿದೆ.
Advertisement
Advertisement
ಫೈವ್ ಸ್ಟಾರ್ ಹೋಟೆಲ್
ತಿಂಡಿ+ಬಾಡಿಗೆ – 3 ಸಾವಿರ ರೂ.
ಮಧ್ಯಾಹ್ನದ ಊಟ – 550
ರಾತ್ರಿಯ ಊಟ – 550
ಒಟ್ಟು 1 ದಿನಕ್ಕೆ – 4,100
ದಂಪತಿಗೆ ಡಬಲ್ ಬೆಡ್ ರೂಂ ನಿಗದಿಯಾಗಿದ್ದು ಒಂದು ದಿನಕ್ಕೆ ಒಟ್ಟು 5,900 ರೂ.(3,700+1,100+1,100) ಆಗಲಿದೆ.
ತ್ರಿಸ್ಟಾರ್ ಹೋಟೆಲ್
ತಿಂಡಿ+ಬಾಡಿಗೆ – 1,500 ರೂ.
ಮಧ್ಯಾಹ್ನದ ಊಟ – 175 ರೂ.
ರಾತ್ರಿಯ ಊಟ – 175 ರೂ.
ಒಟ್ಟು 1 ದಿನಕ್ಕೆ – 1,850 ರೂ.
ದಂಪತಿಗೆ ಡಬಲ್ ಬೆಡ್ ರೂಂ ನಿಗದಿಯಾಗಿದ್ದು ಒಂದು ದಿನಕ್ಕೆ ಒಟ್ಟು 2,450 ರೂ.(1,500+350+350) ಆಗಲಿದೆ.
ಬಜೆಟ್ ಹೋಟೆಲ್
ಬಜೆಟ್ ಹೋಟೆಲ್ 1,200 ರೂ. ದರವನ್ನು ನಿಗದಿ ಪಡಿಸಲಾಗಿದೆ. ಬಾಡಿಗೆ, ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲವೂ ಸೇರಿ 1,200 ರೂ. ಆಗಲಿದೆ.
ಇಂಗ್ಲೆಂಡಿನಿಂದ ಬಂದ 323 ಮಂದಿಯನ್ನು ನಗರದ ವಿವಿಧ ಹೋಟೆಲಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಂದು ಬೆಳಗ್ಗೆ 80 ಮಂದಿಯನ್ನು ಫೈವ್ ಸ್ಟಾರ್ ಯಶವಂತಪುರದ ತಾಜ್ ಹೋಟೆಲಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬಿಎಂಟಿಸಿ ಬಸ್ ನಲ್ಲಿ ಬಂದ ಕೂಡಲೇ ಇವರ ಲಗೇಜ್ ಗಳಿಗೆ ರಾಸಾಯನಿಕ ಸಿಂಪಡನೆ ಮಾಡಲಾಯಿತು. ಬಳಿಕ ಥರ್ಮಲ್ ಸ್ಕ್ರೀನಿಂಗ್ ಮಾಡಿ ಹೋಟೆಲ್ ಒಳಗಡೆ ಕಳುಹಿಸಲಾಯಿತು.
ಹೋಟೆಲ್ ಆಯ್ಕೆಯನ್ನು ಕನ್ನಡಿಗರಿಗೆ ಬಿಡಲಾಗಿದ್ದು, ಯಶವಂತಪುರದ ತಾಜ್ ವಿವಾಂತ್ 108 ಕೊಠಡಿ, ವೈಟ್ ಫೀಲ್ಡ್ ನಲ್ಲಿರುವ ಕೀಸ್ ಹೋಟೆಲಿನಲ್ಲಿ 158 ಕೊಠಡಿ, ಮಾರತ್ ಹಳ್ಳಿಯಲ್ಲಿರುವ ಲೋಟಸ್ ಪಾರ್ಕ್ ಹೋಟೆಲಿನ 41 ಕೊಠಡಿಯನ್ನು ಕಾಯ್ದಿರಿಸಲಾಗಿದೆ.