– ನಾಲ್ವರ ಬಂಧನ
ಮುಂಬೈ: ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆಯ (Bridge Missing) ಕಳ್ಳತನವಾಗಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಹೌದು. ಅಚ್ಚರಿಯಾದರೂ ಸತ್ಯ ಘಟನೆಯಾಗಿದ್ದು, ಇದು ಮುಂಬೈನ ಮಲಾಡ್‍ನಲ್ಲಿ ನಡೆದಿದೆ. ಸೇತುವೆ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
2 ಲಕ್ಷ ಮೌಲ್ಯದ ಸುಮಾರು 90 ಅಡಿ ಉದ್ದವಿರುವ ಈ ಸೇತುವೆಯನ್ನು ಮುಂಬೈನ ಮಲಾಡ್ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಬಳಸಲಾಗುತ್ತಿತ್ತು. ಇದೀಗ ಈ ಸೇತುವೆ ನಾಪತ್ತೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದು ಕಳ್ಳತನವಾಗಿರುವುದು ಬಯಲಾಗಿದೆ. ಕಬ್ಬಿಣದ ಸೇತುವೆಯನ್ನು ಕಳ್ಳರ ಗುಂಪೊಂದು ಕೆಡವಿ ಅದನ್ನು ಟ್ರಕ್‍ಗಳಲ್ಲಿ ಸಾಗಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕಳೆದ ವರ್ಷ ಜೂನ್ ತಿಂಗಳಲ್ಲಿ ಅದಾನಿ ಎಲೆಕ್ಟ್ರಿಸಿಟಿ (Adani Electricity) ಸಂಸ್ಥೆಯ ಬೃಹತ್ ವಿದ್ಯುತ್ ಕೇಬಲ್‍ಗಳನ್ನು ಸಾಗಿಸುವ ಸಲುವಾಗಿ ಈ ಕಬ್ಬಿಣದ ಸೇತುವೆಯನ್ನು ಚರಂಡಿಯ ಮೇಲೆ ಇರಿಸಲಾಗಿತ್ತು. ಅದಾದ ಬಳಿಕ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಶಾಶ್ವತ ಸೇತುವೆ ಬಂದ ನಂತರ ಅದನ್ನು ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಪ್ರತಿಕೂಲ ಹವಾಮಾನ- ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ರದ್ದು
Advertisement
ಇತ್ತ ಸ್ಥಳೀಯರ ಗಮನಕ್ಕೆ ಬಂದ ಬಳಿಕ ಸೇತುವೆ ನಾಪತ್ತೆಯಾಗಿರುವುದನ್ನು ಕಂಡು ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯು ಜೂನ್ 26ರಂದು ಪೊಲೀಸರಿಗೆ ದೂರು ನೀಡಿತ್ತು. ಜನನಿಬಿಡ ಪ್ರದೇಶದಲ್ಲಿಯೇ ಈ ಸೇತುವೆ ಇದ್ದು, ಜನ ನೋಡ ನೋಡುತ್ತಿದ್ದಂತೆಯೇ ಕಳವು ಮಾಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಪ್ರದೇಶದಲ್ಲಿ ಯಾರ ಗಮನಕ್ಕೂ ಬಾರದೆ ಕಳ್ಳರು ಅದನ್ನು ಹೇಗೆ ಕದಿಯಲು ಸಾಧ್ಯವಾಯಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಈ ಸಂಬಂಧ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ಯಾಸ್ ಕಟರ್ ಯಂತ್ರಗಳೊಂದಿಗೆ ಸೇತುವೆಯತ್ತ ಸಾಗುತ್ತಿದ್ದ ಭಾರೀ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಸದ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಉಳಿದ ಮೂವರು ಆತನ ಸಹಚರರು ಎನ್ನಲಾಗಿದೆ.
ಒಟ್ಟಾರೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು, ಈ ಪ್ರಕರಣದಲ್ಲಿ ಇನ್ನು ಯಾರ್ಯಾರ ಕೈವಾಡ ಇದೆಯೆಂದು ತೀವ್ರ ತನಿಖೆಗೆ ಇಳಿದಿದ್ದಾರೆ.
Web Stories