ಭೋಪಾಲ್: ಕಾಂಗ್ರೆಸ್ ನಾಯಕನೊಬ್ಬ 60 ವರ್ಷದ ಬಿಜೆಪಿ ನಾಯಕನನ್ನು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಪಲಿಯಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಭಾನುವಾರ ಸಂಜೆ 5.30ರ ಸುಮಾರಿಗೆ ನಡೆದಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದೋರ್ ನಲ್ಲಿ ಮತದಾನ ಕೊನೆಯಾಗುತ್ತಿದ್ದಂತೆಯೇ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಬಿಜೆಪಿ ನಾಯಕ ನೇಮಿಚಂದ್ ತನ್ವಾರ್‍ನನ್ನು ಕಾಂಗ್ರೆಸ್ ನಾಯಕ ಅರುಣ್ ಶರ್ಮಾ ಆತನ ಮನೆಯ ಹೊರಗಡೆಯೇ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಆರೋಪಿ ಅರುಣ್ ಶರ್ಮಾನ ಇಬ್ಬರು ಗಂಡು ಮಕ್ಕಳು ಕೂಡ ಜೊತೆಗಿದ್ದರು ತನ್ವಾರ ಪತ್ನಿ ಆರೋಪಿಸಿದ್ದಾರೆ.
Advertisement
ಈ ಮಧ್ಯೆ ರಾಜಕೀಯ ದ್ವೇಷದಿಂದಲೇ ಬಿಜೆಪಿ ನಾಯಕನನ್ನು ಕೊಲೆ ಮಾಡಲಾಗಿದೆ. ತನ್ವರ್ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದನು ಎಂದು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಹೇಳಿದ್ದಾರೆ.
Advertisement
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಭಾನುವಾರ ಮಧ್ಯಾಹ್ನದ ಬಳಿಕ ತನ್ವರ್ ಹಾಗೂ ಆತನ ಮಕ್ಕಳಿಗೆ ಬೆದರಿಕೆ ಹಾಕಲಾಗಿತ್ತು. ಇದರಿಂದ ತಾವು ಮುಂದೆ ಕೆಟ್ಟ ಪರಿಣಾಮ ಎದರಿಸಬೇಕಾಗುತ್ತದೆ ಎಂದು ತನ್ವರ್ ತಿಳಿಸಿದ್ದರು ಎಂದು ಸಿಂಗ್ ಹೇಳಿದರು.
ಪ್ರಕರಣ ಸಂಬಂಧ ಆರೋಪಿ ಕಾಂಗ್ರೆಸ್ ನಾಯಕನನ್ನು ಕೂಡಲೇ ಬಂಧಿಸಲಾಗುವುದು ಅಲ್ಲದೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಭರವಸೆ ನೀಡಿದ್ದಾರೆ.