ದಾಂಪತ್ಯ ಜಿವನದಲ್ಲಿ ಪ್ರೀತಿ (Love) ಎಷ್ಟು ಮುಖ್ಯವೋ ಲೈಂಗಿಕತೆ ಕೂಡ ಅಷ್ಟೇ ಮುಖ್ಯ. ಅನೇಕ ದಂಪತಿ ತಮ್ಮ ಲೈಂಗಿಕ ಜೀವನದ ಮೇಲೆ ಗಮನಹರಿಸಬೇಕು. ಸಂಗಾತಿಗಳಲ್ಲಿ ಕೆಲವೊಮ್ಮೆ ಒಬ್ಬರು ಹೆಚ್ಚು ಲೈಂಗಿಕ ಆಸಕ್ತಿ ಹೊಂದಿದ್ದರೆ, ಇನ್ನೂ ಕೆಲವರು ಇನ್ನೋರ್ವ ವ್ಯಕ್ತಿಗಿಂತ ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಕ್ರಮೇಣ ದಾಂಪತ್ಯದಲ್ಲಿ ಅನ್ಯೋನ್ಯತೆಯ ಸಮಸ್ಯೆಗಳು ಸೃಷ್ಟಿಯಾಗಬಹುದು.
ಇನ್ನೊಬ್ಬ ವ್ಯಕ್ತಿಯು ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದನ್ನು ನಿಲ್ಲಿಸಿದಾಗ ಆತ ಗಂಭೀರವಾಗಿ ಖಿನ್ನತೆಗೆ ಒಳಗಾಗಬಹುದು. ಆದರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ಪುರುಷರು ಅನೈತಿಕ ಸಂಬಂಧದ ಕಡೆಗೆ ಆಸಕ್ತಿ ಹೊಂದಿದ್ದಾರೆ. ಏಕೆಂದರೆ ಅತಿಯಾಗಿ ಪೋರ್ನ್ ವೀಡಿಯೋಗಳು ಹಾಗೂ ಅಶ್ಲೀಲ ಚಿತ್ರಗಳ ವೀಕ್ಷಣೆಯೇ ಇದಕ್ಕೆ ಕಾರಣ ಅನ್ನೋದು ಆಧುನಿಕ ಪ್ರೇಮಿಗಳ ಸಮೀಕ್ಷೆಯಲ್ಲಿ (Modern Lovers Survey) ತಿಳುದುಬಂದಿದೆ. ಇದನ್ನೂ ಓದಿ: ದೇಶದಲ್ಲಿ ಇದೆ 3167 ಹುಲಿಗಳು – ಪ್ರಕೃತಿಯನ್ನು ರಕ್ಷಿಸುವುದು ಭಾರತೀಯ ಸಂಸ್ಕೃತಿಯ ಭಾಗ: ಮೋದಿ
ಇತ್ತೀಚೆಗೆ 16 ರಿಂದ 44 ವರ್ಷದೊಳಗಿನ 600 ಜನರನ್ನೊಳಗೊಂಡು ನಡೆದ ಪ್ರೇಮಿಗಳ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯಲ್ಲಿ ಶೇ.60 ಪುರುಷರು, ಶೇ.32 ರಷ್ಟು ಮಹಿಳೆಯರು ಅನೈತಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ ಲೈಂಗಿಕತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಶೇ.37 ಪುರುಷರು, ಶೇ.32 ರಷ್ಟು ಮಹಿಳೆಯರು ಸಾಮಾಜಿಕ ಜಾಲತಾಣದ ಮೂಲಕ ಸಂವಹನ ನಡೆಸಿ ವಂಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು
ಇನ್ನೂ ಒಬ್ಬರೇ ಪತ್ನಿಯರನ್ನ ಹೊಂದಿರುವ ಶೇ.21 ಪುರುಷರು ತಮ್ಮ ಲೈಂಗಿಕ ಬಯಕೆ ತೀರಿಸಿಕೊಳ್ಳಲು ಡೇಟಿಂಗ್ ಅಪ್ಲಿಕೇಶನ್‌ಗಳ ಮೊರೆ ಹೋಗಿದ್ದಾರೆ. ಏಕೆಂದರೆ ಪುರುಷರು ದಾರಿತಪ್ಪುವ ಸಾಧ್ಯತೆಗಳಿದ್ದರೂ ಪತ್ನಿಯರು ಅವರ ಲೈಂಗಿಕ ಆಸಕ್ತಿಗೆ ಸಹಕರಿಸುತ್ತಿಲ್ಲ. ಈ ಮಧ್ಯೆ ಸ್ಮಾರ್ಟ್ಫೋನ್ ಹೊಂದಿರುವ ಅನೇಕ ವಯಸ್ಕರನ್ನ ನೈಜ ಜೀವನದ ಸಂಬಂಧಗಳಿಂದ ಡಿಜಿಟಲ್ ಮಾಧ್ಯಮಗಳ ಕಡೆಗೆ ಸೆಳೆದುಕೊಂಡಿದೆ. 4ನೇ ಒಂದು ಭಾಗಷ್ಟು ಪುರುಷರು ಎರಡು-ಮೂರು ದಿನಗಳಿಗೊಮ್ಮೆ ಪೋರ್ನ್ ವೀಕ್ಷಿಸಿದರೆ, ಶೇ.14 ರಷ್ಟು ಯುವಸಮೂಹ ಪ್ರತಿದಿನ ಪೋರ್ನ್ ವೀಡಿಯೋ ಹಾಗೂ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾರೆ. ಈ ನಡುವೆ ಶೇ.30 ಪುರುಷರು ಲೈಂಗಿಕ ಆದ್ಯತೆಗಳ ಬಗ್ಗೆ ಗೊಂದಲದಲ್ಲಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇನ್ನೂ ಒಂಟಿ ಜೀವನ ನಡೆಸುವ ಕೆಲವರು ನಗ್ನತೆಯನ್ನ ನೋಡಲು ಇಷ್ಟಪಡುತ್ತಾರೆ. ಅದಕ್ಕಾಗಿ ಕೃತಕ ಬುದ್ಧಿಮತ್ತೆಯ (AI Chatbot) ಚಾಟ್‌ಬಾಟ್‌ಗಳೊಂದಿಗೆ ಸಂದೇಶ ಕಳುಹಿಸುವುದು, ಸುಂದರ ಹುಡುಗಿಯರನ್ನ ಆಕರ್ಷಿಸುವ ಉದ್ರಿಕ್ತ ಪ್ರಯತ್ನದಲ್ಲಿ ವಿವಿಧ ವೇದಿಕೆಗಳಲ್ಲಿ ತಮ್ಮ ಪ್ರೊಫೈಲ್‌ಗಳನ್ನ ಅಪ್ಡೇಟ್ ಮಾಡುವುದು ಮಾಡುತ್ತಿದ್ದಾರೆ. ಹಾಗಾಗಿ ಸಂಬಂಧಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತೀ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.