ನೈಪಿಡಾವ್: ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗಲೇ ಭೂಕಂಪ ಸಂಭವಿಸಿದ್ದರಿಂದ ಸುಮಾರು 700ಕ್ಕೂ ಹೆಚ್ಚು ಬಂಧುಗಳು ಮೃತಪಟ್ಟಿದ್ದಾರೆ ಎಂದು ಮ್ಯಾನ್ಮಾರ್ ಮುಸ್ಲಿಂ ಸಂಘಟನೆ (Myanmar Muslim Organisation) ತಿಳಿಸಿದೆ.
ಪವಿತ್ರ ರಂಜಾನ್ (Ramadan) ಸಮಯದಲ್ಲಿ ಮಸೀದಿಯಲ್ಲಿ (Mosques) ಪ್ರಾರ್ಥನೆ (Friday Prayer) ನಡೆಯುತ್ತಿತ್ತು. ಈ ಸಂದರ್ಭದಲ್ಲೀ ಭೂಕಂಪ (Earthquake) ಸಂಭವಿಸಿದ್ದರಿಂದ ಸುಮಾರು 60 ಮಸೀದಿಗಳು ಹಾನಿಗೊಳಗಾಗಿವೆ ಅಥವಾ ನಾಶವಾಗಿವೆ ಎಂದು ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್‌ವರ್ಕ್‌ನ ಸ್ಟೀರಿಂಗ್ ಕಮಿಟಿಯ ಸದಸ್ಯರಾದ ತುನ್ ಕಿ ಹೇಳಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 334 ಅಣುಬಾಂಬ್‌ಗಳ ಶಕ್ತಿಗೆ ಹೋಲಿಸಿದ ವಿಜ್ಞಾನಿಗಳು
ಮಸೀದಿಗಳಲ್ಲಿ ಸಾವನ್ನಪ್ಪಿದವರನ್ನು ಇದುವರೆಗಿನ ಭೂಕಂಪದಲ್ಲಿ ಸಾವನ್ನಪ್ಪಿದ 2 ಸಾವಿರಕ್ಕೂ ಹೆಚ್ಚು ಜನರ ಅಧಿಕೃತ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಭೂಕಂಪದ ಸಮಯದಲ್ಲಿ ಮಸೀದಿಗಳು ಉರುಳಿ ಬೀಳುವುದು ಮತ್ತು ಜನರು ಆ ಜಾಗದಿಂದ ಸುರಕ್ಷಿತ ಪ್ರದೇಶಕ್ಕೆ ಓಡಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾನಿಗೊಳಗಾದ ಹೆಚ್ಚಿನ ಮಸೀದಿಗಳು ಹಳೆಯ ಕಟ್ಟಡಗಳಾಗಿದ್ದವು ಎಂದು ತುನ್ ಕಿ ಹೇಳಿದರು. ಇದನ್ನೂ ಓದಿ: ಆಪರೇಷನ್ ಬ್ರಹ್ಮ | ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್‌ಗೆ ಭಾರತ ನೆರವು
ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ರಾಜಧಾನಿ ಮ್ಯಾನ್ಮಾರ್ ನೈಪಿಡಾವ್ ಮತ್ತು ಎರಡನೇ ಅತಿದೊಡ್ಡ ನಗರವಾದ ಮಂಡಲೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದೆ.
ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.