ಸರ್ಕಾರಿ ಅಧಿಕಾರಿಗಳೆಂದು ಗ್ರಾಮಸ್ಥರನ್ನೇ ಯಾಮಾರಿಸಿ ಹಾಡಹಗಲೇ ಸೇತುವೆ ಕದ್ರು!

Public TV
2 Min Read
bihar bridge

ಪಾಟ್ನಾ: ಸರ್ಕಾರಿ ಅಧಿಕಾರಿಗಳೆಂದು ಸುಳ್ಳು ಹೇಳಿ ಹಾಡಹಗಲೇ 60 ಅಡಿ ಕಬ್ಬಿಣದ ಸೇತುವೆಯನ್ನು ಕದ್ದ ವಿಚಿತ್ರ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ.

ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ಬಿಹಾರದ ರೋಹ್ತಾಸ್ ಜಿಲ್ಲೆಯ ಅಮಿಯಾವರ್ ಗ್ರಾಮಕ್ಕೆ ಕೆಲ ಕಳ್ಳರು ಬಂದಿದ್ದಾರೆ. ಅಲ್ಲಿ ಅವರು 1972ರಲ್ಲಿ ಅರ್ರಾ ಕಾಲುವೆ ಮೇಲೆ ನಿರ್ಮಿಸಲಾದ ಸೇತುವೆಯನ್ನು ಗಮನಿಸಿದ್ದಾರೆ. ಇದು ಈಗ ತುಂಬಾ ಹಳೆಯದಾಗಿದೆ ಮತ್ತು ಅಪಾಯಕಾರಿ ಆಗಿದೆ. ಇದರಿಂದಾಗಿ ಇವೆಲ್ಲವನ್ನು ತೆರವುಗೊಳಿಸಿ ಹೊಸದನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರನ್ನು ನಂಬಿಸಿದ್ದಾರೆ.

ಇದಕ್ಕೆ ಸ್ಥಳೀಯ ಗ್ರಾಮಸ್ಥರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಏಕೆಂದರೆ ಅವರು ಈ ಸೇತುವೆಯನ್ನು ಬಳಸುತ್ತಿರಲಿಲ್ಲ. ಬದಲಿಗೆ ಪಕ್ಕದ ಕಾಂಕ್ರಿಟ್ ಸೇತುವೆಯನ್ನು ಬಳಸುತ್ತಿದ್ದರು. ಇದರಿಂದಾಗಿ ಕಳ್ಳರು ಸೇತುವೆ ಕದಿಯಲು ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತದವರ ಸಹಾಯವನ್ನು ಪಡೆದಿದ್ದಾರೆ. ಜೊತೆಗೆ ಬುಲ್ಡೋಜರ್, ಗ್ಯಾಸ್ ಕಟ್ಟರ್ ಬಳಸಿ ಸೇತುವೆಯನ್ನು ಕೆಡವಿದ್ದಾರೆ. ಈ ಕೆಲಸ ಮಾಡಿ ಮುಗಿಸಲು ಮೂರು ದಿನ ತೆಗೆದುಕೊಂಡಿದ್ದಾರೆ. ನಂತರ ಸ್ಕ್ರ್ಯಾಪ್ ಮೆಟಲ್ ಅನ್ನು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು, ಉತ್ತಮ ಆಡಳಿತವೂ ಬೇಕು: ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

patna bidge

ಈ ಬಗ್ಗೆ ನಸ್ರಿಗಂಜ್ ಎಸ್‍ಎಚ್‍ಒ ಸುಭಾಷ್ ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳಿಂದ ದೂರು ಸ್ವೀಕರಿಸಿದ್ದೇವೆ. ಅದರಂತೆ ಅಪರಿಚಿತರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಆರೋಪಿಗಳ ಗುರುತು ಪತ್ತೆಗೆ ರೇಖಾಚಿತ್ರ ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಂತಹ ಯಾವುದೇ ವಸ್ತುಗಳ ಬಗ್ಗೆ ಮಾಹಿತಿ ತಿಳಿದರೆ ಕೂಡಲೇ ತಿಳಿಸಲು ಸ್ಕ್ರ್ಯಾಪ್ ಡೀಲರ್‌ಗಳಿಗೆ ಎಚ್ಚರಿಕೆ ನೀಡಿದ್ದೇವೆ. ಸೇತುವೆ 60 ಅಡಿ ಉದ್ದ ಮತ್ತು 12 ಅಡಿ ಎತ್ತರವಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಎಲ್ಲಾ ಸಂಸ್ಥೆಗಳು ಆರ್‌ಎಸ್‌ಎಸ್‌ ಹಿಡಿತದಲ್ಲಿವೆ: ರಾಹುಲ್‌ ಗಾಂಧಿ ವಾಗ್ದಾಳಿ

Share This Article