ನವದೆಹಲಿ: ನಗರದ ಏಮ್ಸ್ ಆಸ್ಪತ್ರೆಯಲ್ಲಿ ಹೊಸ ರೋಗಿಗಳು ಶಸ್ತ್ರಚಿಕಿತ್ಸೆಗೆ ಆರು ವರ್ಷ ಕಾಯಬೇಕಿದೆ. ರೋಗಿಯೊಬ್ಬರಿಗೆ ವೈದ್ಯರು 2025ಕ್ಕೆ ಶಸ್ತ್ರಚಿಕಿತ್ಸೆ ದಿನಾಂಕ ನೀಡಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಂದೆರಡು ದಿನ ಕಾಯುವ ಪರಿಸ್ಥಿತಿ ಇದೆ. ಆದ್ರೆ ದೆಹಲಿಯಲ್ಲಿ ಆರು ವರ್ಷ ವೇಟ್ ಮಾಡಬೇಕಿದೆ. ಉತ್ತರ ಪ್ರದೇಶದ ಮೀರತ್ ನಿವಾಸಿ 32 ವರ್ಷದ ನಸ್ರೀನ್ ಬಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರ್ಥಿಕವಾಗಿ ಹಿಂದಿರುವ ನಸ್ರೀನ್ ಬಾನು ಕಳೆದ 13 ವರ್ಷಗಳಿಂದ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Advertisement
ಡಾಕ್ಟರ್ ಪ್ರಕಾರ ನನ್ನ ಹೃದಯದ ಕವಾಟಗಳು ಮುದುಡುತ್ತಿವೆ. ಶಸ್ತ್ರ ಚಿಕಿತ್ಸೆ ನಡೆಯದೇ ಗುಣಮುಖರಾಗಲ್ಲ ಎಂದಿದ್ದಾರೆ. ಆದ್ರೆ ಏಮ್ಸ್ ಅಧಿಕಾರಿಗಳು 6 ವರ್ಷಗಳ ನಂತರ ಅಂದ್ರೆ 2025ಕ್ಕೆ ಶಸ್ತ್ರಚಿಕಿತ್ಸೆಯ ದಿನಾಂಕ ನೀಡಿದ್ದಾರೆ. ಈ ಸಂಬಂಧ ವೈದ್ಯರ ಜೊತೆ ನಸ್ರೀನ್ ಮಾತನಾಡಿದರೆ, ಬೇಕಾದರೆ ಮತ್ತೊಂದು ಆಸ್ಪತ್ರೆಗೆ ಹೋಗಬಹುದು ಎಂದು ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ನಸ್ರೀನ್ ಬಾನು ಹೇಳುತ್ತಾರೆ.